ಮಂಜೇಶ್ವರ : ಬಹುಮುಖ ಪ್ರತಿಭೆ ಎಂದೆನಿಸಿಕೊಂಡ ಶರಣ್ಯಾ ಪಿ. ಬಂಗೇರ ಗಂಗೂಬಾಯಿ ಹಾನಗಲ್ ಮೈಸೂರು ಯುನಿವರ್ಸಿಟಿ ನಡೆಸಿದ ಈ ವರ್ಷದ 2026 ನೇ ಸಾಲಿನ ವಿದ್ವತ್ ಅಂತಿಮ ಪರೀಕ್ಷೆಯನ್ನು ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗುವದರೊಂದಿಗೆ ವಿದ್ವತ್ ಮೈಲುಗಲ್ಲನ್ನು ದಾಟಿ ಮತ್ತೊಂದು ಸಾಧನೆಯನ್ನು ಮಾಡಿರುವಳು.
ಶಾಲೆಗೆ ಸೇರುವ ಮೊದಲೇ ನಾಟ್ಯ ಗುರು ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಇವರ ನಾಟ್ಯ ಶಾಲೆಯಲ್ಲಿ ಸೇರ್ಪಡೆಗೊಂಡು ಹದಿನಾಲ್ಕು ವರ್ಷಗಳ ಕಾಲ ಭರತನಾಟ್ಯ ಕಲಿಯುತ್ತಾ ಬಂದಿರುವ ಈಕೆ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಹಾಗೂ ಅಂತಿಮ ವಿದ್ವತ್ ಪರೀಕ್ಷೆಗಳನ್ನು ವಿಶಿಷ್ಟ ಹಾಗೂ ಪ್ರಥಮ ಶ್ರೇಣಿ ಗಳಲ್ಲಿ ತೇರ್ಗಡೆಯಾಗುತ್ತಾ ಬಂದಿರುವಳು.
ಅಲ್ಲದೆ ಭಾರತ ಸರಕಾರದ ಸಾಂಸ್ಕೃತಿಕ ಸಚಿವಾಲಯದಿಂದ (ಸಿ ಸಿ ಆರ್ ಟಿ) ಕೊಡಲ್ಪಡುವ ಅತ್ಯುನ್ನತ ಸ್ಕಾಲರ್ಷಿಪ್ ಅವಾರ್ಡ್ ಪಡೆದಿರುವಳು.
ಅಲ್ಲದೆ ಯಕ್ಷಗಾನದಲ್ಲಿ ಅಶ್ವಥ್ ಮಂಜನಾಡಿ ಯವರ ಶಿಷ್ಯೆಯಾಗಿ ಅಪ್ರತಿಮ ಸಾಧನೆಯನ್ನು ಮಾಡಿರುವಳು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ಬಾರಿ ಸ್ಪರ್ಧಿಸಿರುದಲ್ಲದೆ, ಅನೇಕ ಕಡೆ ಪ್ರದರ್ಶನ ನೀಡಿ ಯಕ್ಷರಂಗದಲ್ಲೂ ಸೖ ಎನಿಸಿ ಕೊಂಡಿರುವಳು.
ಅಷ್ಟೇ ಅಲ್ಲದೆ ಆನಂದಾಶ್ರಮ ಪ್ರೌಢಶಾಲೆ ಯ ಡ್ರಾಯಿಂಗ್ ಅಧ್ಯಾಪಕ ಹರೀಶ್ ಸಾರ್ ಅವರ ಮಾರ್ಗದರ್ಶನ ದಲ್ಲಿ ಡ್ರಾಯಿಂಗ್ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ ಎರಡು ಪರೀಕ್ಷೆಗಳನ್ನು ಬರೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವಳು.
ಅಷ್ಟೇ ಅಲ್ಲದೆ ಕಲಿಕೆಯಲ್ಲೂ ಮೊದಲಿದ್ದು SSLC ಮತ್ತು PUC ಪರೀಕ್ಷೆಗಳಲ್ಲಿ ಶೇಖಡಾ 94 ಮತ್ತು 97 ಅಂಕದೊಂದಿಗೆ ತೇರ್ಗಡೆಯಾಗಿರುವಳು.
ಪ್ರಸ್ತುತ ಸಹ್ಯಾದ್ರಿ ಇಂಜಿನಿಯರ್ ಕಾಲೇಜಿ ನಲ್ಲಿ ತೃತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದು ತಾಂತ್ರಿಕ ಶಿಕ್ಷಣ ಮುಂದುವರಿಸುತ್ತಿರುವ ಈಕೆ ಶ್ರೀ ದುರ್ಗಾ ಪ್ರಸಾದಿತ ಹಿರಿಯ ಪ್ರಾಥಮಿಕ ಶಾಲೆ ತಲಪಾಡಿ, ಆನಂದಾಶ್ರಮ ಪ್ರೌಢಶಾಲೆ, ಪರಿಜ್ಞಾನ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ ಯಾಗಿರುವಳು.
ಕಲಾರಂಗದಲ್ಲಿ ಅನೇಕ ಸಾಧನೆಯನ್ನು ಮಾಡುವುದರೊಂದಿಗೆ ಹಲವಾರು ಪುರಸ್ಕಾರಗಳನ್ನು ಪಡೆದಿರುತ್ತಾಳೆ... ಜಿಕೆ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ತುಳುನಾಡ ಸಿರಿ ಪುರ್ಪ ಬಿರುದು ಪಡೆದಿರುವ ಈಕೆ ತಲಪಾಡಿ ಬಜಂಗ್ರೆ ಪುರುಷೋತ್ತಮ್ ಎನ್ ಬಂಗೇರ ಹಾಗೂ ಲೀಲಾವತಿ ದಂಪತಿಯ ಸುಪುತ್ರಿಯಾಗಿದ್ದಾಳೆ.
