ಸಾವರ್ಕರ್ ರಸ ಪ್ರಶ್ನೆ ವಿಷಯದಲ್ಲಿ ಶಿಕ್ಷಕನ ಅಮಾನತು ಪ್ರಕರಣ; ಶಿಕ್ಷಣ ಇಲಾಖೆಯ ತೀರ್ಮಾನವನ್ನು ಪ್ರಶ್ನಿಸಿದ ರಾಜ್ಯ ಹೈಕೋರ್ಟ್, ವಿವರಣೆ ನೀಡುವಂತೆ ಆದೇಶ


 

   ಕೊಚ್ಚಿನ್: ಕಾಸರಗೋಡು ಜಿಲ್ಲೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿನಾಯಕ ದಾಮೋದರ ಸಾವರ್ಕರ್  ಕುರಿತು ಪ್ರಶ್ನೆ ಕೇಳಿದ್ದಕ್ಕಾಗಿ ಅಧ್ಯಾಪಕರೊಬ್ಬರನ್ನು ಅಮಾನತುಗೊಳಿಸಿರುವ ಕ್ರಮದ ಕುರಿತು ಕೇರಳ ಹೈಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ

  ಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಸಿದ್ಧಪಡಿಸಿದ್ದಕ್ಕಾಗಿ ಒಬ್ಬ ಶಿಕ್ಷಕನನ್ನು ಹೇಗೆ ಅಮಾನತುಗೊಳಿಸಲು ಸಾಧ್ಯ? ಅಮಾನತು ಎಂಬುದು ಶಿಕ್ಷೆಯ ರೂಪವಾಗಲು ಸಾಧ್ಯವೇ ಎಂದು ನ್ಯಾಯಾಲಯ ಅಧ್ಯಾಪಕರ ಅಮಾನತು ಆದೇಶವನ್ನು ಪ್ರಶ್ನಿಸಿದೆ.

 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿಲುವೇನು ಎಂಬುದನ್ನು ತಿಳಿಸುವಂತೆ ಹೈಕೋರ್ಟ್ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ, ವಿವರಣೆಯನ್ನು ಕೋರಿದೆ.

ಕಾಸರಗೋಡಿನ ಶಾಲೆಯೊಂದರಲ್ಲಿ ಹಮ್ಮಿಕೊಳ್ಳಲಾಗಿದ್ದ 'ಫ್ರೀಡಂ ಕ್ವಿಜ್' (Freedom Quiz) ರಸಪ್ರಶ್ನೆ ಸ್ಪರ್ಧೆಯಲ್ಲಿ "ಬ್ರಿಟಿಷರಿಂದ ಅತ್ಯಂತ ಹೆಚ್ಚು ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ಯಾರು?" ಎಂಬ ಪ್ರಶ್ನೆಗೆ 'ವಿ.ಡಿ. ಸಾವರ್ಕರ್' ಎಂದು ಕೀ-ಉತ್ತರ ಸಿದ್ಧಪಡಿಸಲಾಗಿತ್ತು. ಇದು ರಾಜಕೀಯ ವಿವಾದಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪ್ರಶ್ನೆ ಸಿದ್ದ ಪಡಿಸಿದ ತಂಡದಲ್ಲಿದ್ದ ಪಳ್ಳತ್ತಡ್ಕ ಶಾಲೆಯ ಹಿರಿಯ ಶಿಕ್ಷಕ ಗುರುಪ್ರಸಾದ್ ಅವರನ್ನು ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು