ಅಂಗಡಿಗೆ ಕೆಲಸಕ್ಕೆಂದು ತೆರಳಿದ 19 ವರ್ಷದ ಯುವತಿ‌ ನಾಪತ್ತೆ


 ಕಾಸರಗೋಡು: ಅಂಗಡಿಗೆ ಕೆಲಸಕ್ಕೆಂದು ತೆರಳಿದ 19 ವರ್ಷದ ಯುವತಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ತಾಯಿ ನೀಡಿದ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪೈವಳಿಕೆ ಆಜಾದ್ ನಗರದ ನಿವಾಸಿ ಫಾತಿಮತ್ ಮಕಾಸ್ ನಾಪತ್ತೆಯಾದ ಯುವತಿ. ಈಕೆ ಉಪ್ಪಳದ ವ್ಯಾಪಾರ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾಳೆ. ಎಂದಿನಂತೆ ನಿನ್ನೆ (ಬುಧವಾರ) ಬೆಳಿಗ್ಗೆ ಮನೆಯಿಂದ ತೆರಳಿದ್ದ ಯುವತಿ, ರಾತ್ರಿ ವಾಪಸ್ ಬಾರದ ಹಿನ್ನೆಲೆಯಲ್ಲಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು