ಬದಿಯಡ್ಕ: 55 ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀಯುತ ಬಿ. ಜ್ಞಾನದೇವ ಶೆಣೈ ಅವರು ನಿರ್ವಹಿಸಿದರು. ಉತ್ಸವ ಸಮಿತಿಯ ಅಧ್ಯಕ್ಷರಾದ ನರೇಂದ್ರ ಬಿ. ಯನ್ ಅಧ್ಯಕ್ಷತೆ ವಹಿಸಿರು ಪ್ರಧಾನ ಕಾರ್ಯದರ್ಶಿ ಗುರು ಪ್ರಸಾದ್.ರೈ.ಕೆ ಸ್ವಾಗತಿಸಿ ತನಿಯಪ್ಪ, ಬದಿಯಡ್ಕ ಧನ್ಯವಾದ ನೀಡಿದರು. ಸಭೆಯಲ್ಲಿ ಕೋಶಾಧಿಕಾರಿಯಾದ ಬಿ. ದೇವದಾಸ ಕಾಮತ್, ಉಪಾಧ್ಯಕ್ಷರಾದ ಗಿರೀಶ್ ರೈ ವಳಮಲೆ, ಕಾರ್ಯದರ್ಶಿ ಶಿವಪ್ರಸಾದ್, ಸಮಿತಿಯ ಪದಾಧಿಕಾರಿಗಳು,ಸದಸ್ಯರು, ಭಗವದ್ಭಕ್ತರು, ಸಂಘ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
Tags
ಬದಿಯಡ್ಕ
