ಕುಂಬಳೆ ಪೊಲೀಸರಿಂದ ಕೋಳಿ ಅಂಕ ಕೇಂದ್ರಕ್ಕೆ ದಾಳಿ; 5 ಮಂದಿಯ ಸೆರೆ, 5 ಕೋಳಿ ವಶ


 ಕಾಸರಗೋಡು: ಕುಂಬಳದ ಇಚಿಲಂಗೋಡು ಬಳಿಯ ಕೋಳಿ ಅಂಕದ ಕೇಂದ್ರದ ಮೇಲೆ ಪೊಲೀಸ್ ದಾಳಿ ನಡೆದಿದೆ. ಎಸ್‌ಐ ಗಣೇಶ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಐವರನ್ನು ಬಂಧಿಸಲಾಗಿದೆ. ಸ್ಥಳದಿಂದ ಐದು ಅಂಕ ಕೋಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಗ್ರಾಲಪುತ್ತೂರು ಬಳಿಯ ಕೆ. ಮಹೇಶ್ (40), ಕಯ್ಯಾರ್ ಜೋಡ್‌ಕಲ್ಲು ಬಳಿಯ ಪ್ರಕಾಶ್ ಶೆಟ್ಟಿ (60), ಮೀಂಜ ಮಿಯಾಪದವು ಅಡುಕ್ಕತ್ತುಗುರಿ ಮನೆಯ ಗಂಗಾಧರ ಮೂಲ್ಯ (63), ಪೈವಳಿಕೆ ನಗರ ಮರಿಕ ಮನೆಯ ಐತಪ್ಪ (40) ಬಂಧಿತ ಆರೋಪಿಗಳಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಿನ್ನೆ (ಭಾನುವಾರ) ಸಂಜೆ ಐರೂವರೆ ಗಂಟೆ ಸುಮಾರಿಗೆ ಪೊಲೀಸರು ಕೋಳಿ ಅಂಕದ ಕೇಂದ್ರವನ್ನು ಸುತ್ತುವರಿದು ಜೂಜಾಟಗಾರರನ್ನು ಬಂಧಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು