ಕುಂಬಳೆ: ಉಸಿರಾಟದ ತೊಂದರೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಕುಂಬಳೆ, ಕಿದೂರು, ಕುಂಡಂಕೇರಡುಕದ ಎಚ್.ಎ. ಗುರುವಪ್ಪ (62) ನಿಧನರಾದರು. ಇವರು ಈ ಹಿಂದೆ ಕಲ್ಲು ಕಟ್ಟುವ ಮೇಸ್ತ್ರಿಯಾಗಿದ್ದರು. ಎಂಟು ವರ್ಷಗಳ ಹಿಂದೆ ಇವರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ದಿನ ಮನೆಯಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಶುಕ್ರವಾರ) ಮುಂಜಾನೆ ಇವರು ಕೊನೆಯುಸಿರೆಳೆದರು. ಪತ್ನಿಯರು ಲಕ್ಷ್ಮಿ, ದಿವಂಗತ ಪ್ರಭಾವತಿ. ಮಕ್ಕಳಾದ ರವಿರಾಜ್ (ಮಾಜಿ ಕುಂಬಳೆ ಪಂಚಾಯತ್ ಸದಸ್ಯ), ಮನುರಾಜ್. ಸೊಸೆಯಂದಿರಾದ ಚಂದ್ರಾವತಿ, ಕೃಪಾ. ಸಹೋದರ-ಸಹೋದರಿಯರಾದ ಬಾಲಚಂದ್ರ, ರವಿಶಂಕರ, ಪ್ರಕಾಶ್, ಹರಿಪ್ರಸಾದ್, ಯಮುನಾ ಎಂಬಿವರನ್ನು ಅಗಲಿದ್ದಾರೆ.
Tags
ಕುಂಬಳೆ
