ನಾಪತ್ತೆಯಾಗಿದ್ದ ಪೊಲೀಸ್ ಸಿಬ್ಬಂದಿ ಮಂಗಳೂರಿನಲ್ಲಿ ಪತ್ತೆ


  ಕಾಸರಗೋಡು: ನಾಪತ್ತೆಯಾಗಿದ್ದ ಪೊಲೀಸ್ ಸಿಬ್ಬಂದಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.

    ಅಂಬಲತ್ತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಅಟ್ಟೇಂಗಾನಂ ಪೋರ್ಕಳದ ಸ್ಯಾಮ್‌ಸನಲ್ (27) ಎಂಬುವವರು ನಾಪತ್ತೆಯಾಗಿದ್ದು ಅವರನ್ನು ಮಂಗಳೂರಿನ ಒಂದು ಲಾಡ್ಜ್‌ನಲ್ಲಿ ಪತ್ತೆಹಚ್ಚಲಾಗಿದೆ. ಸೈಬರ್ ಸೆಲ್ ಸಹಾಯದಿಂದ ಅಂಬಲತ್ತರ ಎಸ್‌ಐ ಪ್ರಕಾಶ್ ನೇತೃತ್ವದಲ್ಲಿ ನಡೆಸಿದ ತನಿಖೆಯ ವೇಳೆ ಇವರನ್ನು ಪತ್ತೆ ಮಾಡಲಾಗಿದೆ.

ಕಾಸರಗೋಡು ಹೆಡ್ ಕ್ವಾರ್ಟರ್ಸ್‌ನಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯಾಗಿರುವ ಇವರು, ಪ್ರಸ್ತುತ ರಾಜಪುರಂ ಪೊಲೀಸ್ ಸ್ಟೇಷನ್‌ನಲ್ಲಿ ಕರ್ತವ್ಯದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಕರ್ತವ್ಯ ಮುಗಿಸಿ ಮನೆಗೆ ಬಂದ ಬಳಿಕ, ಕಾಞಂಗಾಡಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಆದರೆ ವಾಪಸ್ ಬಾರದ ಕಾರಣ ಕುಟುಂಬಸ್ಥರು ಅಂಬಲತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ನಾಪತ್ತೆಯಾಗಿದ್ದ ಪೊಲೀಸ್ ಸಿಬ್ಬಂದಿಯ ಮೊಬೈಲ್ ಟವರ್ ಲೊಕೇಶನ್ ಮೊದಲು ವಯನಾಡ್ ನಂತರ ಮೈಸೂರಿನಲ್ಲಿ ಪತ್ತೆಯಾಗಿತ್ತು.

   ತನಿಖೆ ಮುಂದುವರಿದಿರುವಾಗ ಸ್ಯಾಮ್‌ಸನಲ್ ಅವರ ಖಾತೆಯಿಂದ ಹಲವಾರು ಬಾರಿ ಹಣ ಡ್ರಾ ಮಾಡಿರುವ ಮಾಹಿತಿ ಲಭ್ಯವಾಯಿತು.

   ಇದರ ಆಧಾರದ ಮೇಲೆ ಮಂಗಳೂರಿನಲ್ಲಿ ನಡೆಸಿದ ಹುಡುಕಾಟದಲ್ಲಿ ಅವರನ್ನು ಪತ್ತೆಹಚ್ಚಲಾಗಿದ್ದು, ಪೊಲೀಸರು ಅವರನ್ನು ಸುರಕ್ಷಿತವಾಗಿ ಊರಿಗೆ ಕರೆತಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು