ಮರಾಟಿ ಸಮಾಜದ ಆಶ್ರಯದಲ್ಲಿ ಪೆರ್ಲದಲ್ಲಿ ಆಟಿಡೊಂಜಿ ದಿನ


 ಪೆರ್ಲ : ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ, ಶ್ರೀ ಶಾರದಾ ಚಾರಿಟಬಲ್ ಟ್ರಸ್ಟ್ ಪೆರ್ಲ, ಶ್ರೀ ಶಾರದಾ ಮಹಿಳಾ ವೇದಿಕೆ ಪೆರ್ಲ ಇದರ ಸಂಯುಕ್ತ ಆಶ್ರಯದಲ್ಲಿ 'ಆಟಿಡೊಂಜಿ  ದಿನ' ಎನ್ನುವ ಕಾರ್ಯಕ್ರಮವನ್ನು ಮರಾಟಿ ಬೋರ್ಡಿಂಗ್ ಹಾಲ್ ಪೆರ್ಲದಲ್ಲಿ  ನಡೆಸಲಾಯಿತು. ಸಾನ್ವಿ ಏಳ್ಕಾನ, ಭವ್ಯ ಮಲಂಗರೆ, ನವೀನ ಕುಮಾರಿ ಏಳ್ಕಾನ, ಮತ್ತು ವಿದ್ಯಾ ಮಣಿಯಂಪಾರೆ ಇವರ ಪ್ರಾರ್ಥನೆಯೊಂದಿಗೆ ಶಾರದಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ ಬಿ.ಜಿ ನಾಯ್ಕರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿ ಆಗಿನ ಕಾಲದ ಆಟಿಯ ವಿಶೇಷತೆ ಹಾಗೂ ಈಗಿನ ಕಾಲದ ಸಂಭ್ರಮದ ಬಗ್ಗೆ ಸವಿವರವಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಗದ್ದೆಯಲ್ಲಿ ಉಳುಮೆ ಮಾಡಿ "ಕಂಡದ ಕೋರಿ" ಎಂಬ ಸಂಪ್ರದಾಯ ಮಾಡುತ್ತಿದ್ದರು. ಆದರೆ ಈಗ ಸಂಘ ಸಂಸ್ಥೆಗಳು ಈ ತಿಂಗಳನ್ನು ಹಬ್ಬವಾಗಿ ಆಚರಿಸುತ್ತಿವೆ ಎಂದರು. ಹಿರಿಯ ಕೃಷಿರಾದ  ಅಪ್ಪಣ್ಣ ನಾಯ್ಕ ಬಾಳೆಗುಳಿಯವರು  ಹಿಂದಿನ ಕಾಲದಲ್ಲಿ ಆಟಿ ಎಂದರೆ ಜನರಿಗೆ ಕಷ್ಟತಿಂಗಳಾಗಿತ್ತು. ಆದರೆ ಕಾಲ ಬದಲಾಗಿದೆ. ಅಂದರೆ ಇಂದು ಈ ಈ ತಿಂಗಳು ಸಂಭ್ರಮದ ತಿಂಗಳಾಗಿದೆ ಎಂದು ನುಡಿದರು. 

 ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ  ಸ.ಮಾ .ಉ .ಹಿರಿಯ ಪ್ರಾಥಮಿಕ ಶಾಲೆ, ಹಾರಾಡಿ ಪುತ್ತೂರು ತಾಲೂಕು ದಕ್ಷಿಣ ಕನ್ನಡ  ಜಿಲ್ಲೆಯ ಪದವೀಧರ ಶಿಕ್ಷಕರಾದ ಜನಾರ್ಧನ ದುರ್ಗ ಇವರು ಆಟಿ ತಿಂಗಳ ವಿಶೇಷತೆಗಳ ಬಗ್ಗೆ ಸಾಂಪ್ರದಾಯಿಕವಾಗಿ ಹಾಗೂ ವೈಜ್ಞಾನಿಕವಾಗಿ ಹೇಗೆ ಸಂಬಂಧಪಟ್ಟಿದೆ ಎನ್ನುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಇಂತಹ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಹಿರಿಯರು ಆಚರಿಸಿಕೊಂಡು ಬರುವ ಸಾಂಪ್ರದಾಯಿಕ ಆಚರಣೆಯನ್ನು ಮುಂದಿನ ಜನತೆಗೆ ಮುಟ್ಟಿಸುವ ಪ್ರಯತ್ನವಾಗಿರುತ್ತದೆ ಎಂದರು. ಶ್ರೀ ಶಾರದಾ ಮರಾಟಿ ಸೇವಾ ಸಂಘದ ಅಧ್ಯಕ್ಷರಾದ ಪುಷ್ಪ ಅಮೆಕ್ಕಳ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಆಟಿ ತಿಂಗಳ ವಿಶೇಷತೆಯ ಬಗ್ಗೆ ಮಾತನಾಡಿ "ನಮ್ಮ ಮರಾಟಿ ಸಂಘದಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ" ಎಂದು ಹೇಳಿದರು.

ಹಿರಿಯ ಮಕ್ಕಳ ತಜ್ಞರಾದ  ಡಾ:  ನಾರಾಯಣ ನಾಯ್ಕ ಕಾಸರಗೋಡು ಇವರು CPR  ನ ಬಗ್ಗೆ ಸಭೆಯಲ್ಲಿ ಮಾಹಿತಿ ಹಾಗೂ ಪ್ರಾಯೋಗಿಕವಾಗಿ ಪ್ರದರ್ಶನ ನೀಡುವುದರೊಂದಿಗೆ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಸಭೆಯಲ್ಲಿ ಬಾಲಕೃಷ್ಣ ನಾಯ್ಕ ಬಾರಿಕ್ಕಾಡ್, ಲಕ್ಷ್ಮಿ ಟೀಚರ್ ನಲ್ಕ, ಡಾ: ಕೃಷ್ಣ ನಾಯ್ಕ ಹಾಗೂ ಸಮುದಾಯದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಮಹಿಳಾಸಂಘದ ಉಪಾಧ್ಯಕ್ಷೆ ಭವಾನಿ ಬಾಳೆಗುಳಿ ಸ್ವಾಗತಿಸಿ, ಸಂಘದ ಸದಸ್ಯೆಯಾದ ವಾರಿಜ ಅಡ್ಯನಡ್ಕ ವಂದಿಸಿದರು. ಕಾರ್ಯ ಕ್ರಮದ ನಿರೂಪಣೆಯನ್ನು ಕವಯತ್ರಿ ಹರ್ಷಿತಾ  ಪೆರ್ಲ ಇವರು ನಿರ್ವಹಿಸಿದರು. ಎಣ್ಮಕಜೆ ಪಂಚಾಯತ್ ಸಿಡಿಎಸ್ ಅಧ್ಯಕ್ಷರಾದ ನವೀನಕುಮಾರಿಯವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಸಂಘದ ಸದಸ್ಯರು ಮನೆಯಿಂದಲೇ ಮಾಡಿ ತಂದಂತಹ  ಸುಮಾರು ಮೂವತ್ತು ವಿಧದ ಸಾಂಪ್ರದಾಯಿಕ  ಖಾದ್ಯಗಳೊಂದಿಗೆ  ಬಾಳೆಎಲೆಯಲ್ಲಿ  ಊಟ  ಮಾಡುವ ವ್ಯವಸ್ಥೆಯನ್ನು  ಮಾಡಲಾಗಿತ್ತು .

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು