ಕೆ.ಎಸ್.ಆರ್.ಟಿ.ಸಿ.ಬಸ್ ನಿರ್ವಾಹಕನ ಮೃತದೇಹ ಮನೆ ಬಳಿಯ ಶೆಡ್ ನಲ್ಲಿ‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ



ಬೋವಿಕಾನ:  18 ವರ್ಷಗಳಿಂದ ಕೆಎಸ್‌ಆರ್‌ಟಿಸಿಯಲ್ಲಿ (KSRTC) ತಾತ್ಕಾಲಿಕ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಯುವಕನ‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ರೆಯಾಗಿದೆ. ಮುಳಿಯಾರು ಮಜಕ್ಕಾರಿನ ದಿವಂಗತ ಮಹಾಲಿಂಗ ಪಾಟಾಳಿ ಎಂಬುವರ ಪುತ್ರ ಯೋಗೀಶ್ ಕುಮಾರ್ (40) ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಸಮೀಪದ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟವರು.
ಯೋಗೀಶ್ ಕಾಸರಗೋಡು-ಸುಳ್ಯ ಮಾರ್ಗದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ (ಸೋಮವಾರ) ಬೆಳಿಗ್ಗೆ ಅವರು ಡ್ಯೂಟಿ ಮುಗಿಸಿ ಮನೆಗೆ ಮರಳಿದ್ದರು. ಮನೆಯಲ್ಲಿ ಯೋಗೀಶ್ ಮತ್ತು ಅವರ ತಾಯಿ ಬೇಬಿ ಮಾತ್ರ ವಾಸಿಸುತ್ತಿದ್ದರು. ತಾಯಿ ನಿನ್ನೆ ಕಾಸರಗೋಡಿನ ಕೇಳುಗುಡ್ಡೆಯಲ್ಲಿದ್ದ ಮನೆಗೆ ಹೋಗಿದ್ದರು. ಹಿಂತಿರುಗಿ ಬಂದಾಗ ಮಗ ಶೆಡ್‌ನೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 
ಈ ಘಟನೆಗೆ ಸಂಬಂಧಿಸಿದಂತೆ ಆದೂರು ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು