ಕಿಳಿಂಗಾರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ


 ನೀರ್ಚಾಲ್:- ಕಿಳಿಂಗಾರ್ ಯುವಕೇಸರಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಏಕಲವ್ಯ ಬಾಲಗೋಕುಲದ ವತಿಯಿಂದ ಸೆಪ್ಟೆಂಬರ್ 6 ರವಿವಾರ ನಡೆಯುವ ಹನ್ನೆರಡನೇ ವರುಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಕಿಳಿಂಗಾರ್ ಶಾಲಾ ಪರಿಸರದಲ್ಲಿ  ತಾಲೂಕು ಸಪ್ಲೈ ಆಫೀಸರ್ ಕೃಷ್ಣ ನಾಯಕ್ ಬಂಡ್ರಡ್ಕ ಇವರು ನೆರವೇರಿಸಿದರು.

ಕ್ಲಬ್ಬಿನ ಅಧ್ಯಕ್ಷ ಸುಧಾಕರ ಅನ್ನೆಪಲ್ಲಡ್ಕ ಅಧ್ಯಕ್ಷತೆ ವಹಿಸಿದರು. ಕ್ಲಬ್ಬಿನ ಸಂಚಾಲಕ ವಸಂತ ಅನ್ನೆಪಲ್ಲಡ್ಕ, ಮಾಜಿ ಅಧ್ಯಕ್ಷರುಗಳಾದ ರಾಮ ಬೇರಿಗೆ, ರಂಜಿತ್ ಕಿಳಿಂಗಾರ್, ಜಯರಾಜ ಅನ್ನೆಪಲ್ಲಡ್ಕ, ಹಾಗೂ ಯಜ್ಞ ಕುಮಾರ್ , ಉದಯ, ಸದಸ್ಯರಾದ ರಕ್ಷಿತ್, ರಾಜೇಶ್,ಏಕಲವ್ಯ ಬಾಲಗೋಕುಲದ ಮಕ್ಕಳು ಉಪಸ್ಥಿತರಿದ್ದರು. ಕೋಶಾಧಿಕಾರಿ ಪ್ರಕಾಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ವಂದಿಸಿದರು. ಸಂಚಾಲಕ ನಾರಾಯಣ.ಪಿ ಪೆರಡಾಲ ಕಾರ್ಯಕ್ರಮ ನಡೆಸಿಕೊಟ್ಟರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು