ಅತಿ ತೀವ್ರ ಮಳೆ; ಕಾಸರಗೋಡು ಸಹಿತ 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ


 ಕಾಸರಗೋಡು: ಕಾಸರಗೋಡು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅತಿ ತೀವ್ರ ಮಳೆ, ನೀರು ನಿಲ್ಲುವ ಸಮಸ್ಯೆ ಹಾಗೂ ಮಳೆನೀರಿನ ಹಠಾತ್ ಹೊನಲು (ಮಲವೆಳ್ಳಪ್ಪಾಚಿಲ್) ಉಂಟಾಗುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ  ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡಿನ ಹೊರತಾಗಿ ಕಣ್ಣೂರು, ವಯನಾಡು ಮತ್ತು ಕೋಝಿಕ್ಕೋಡ್  ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾದ ಇತರ ಜಿಲ್ಲೆಗಳಾಗಿವೆ.

  ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ರಾತ್ರಿ (ಗುರುವಾರ) ಪ್ರಾರಂಭವಾದ ಮಳೆ ಇಂದೂ ಮುಂದುವರಿದಿದೆ. ಪ್ರಮುಖ ನದಿಗಳಲ್ಲೆಲ್ಲಾ ನೀರಿನ ಮಟ್ಟ ಏರಿಕೆಯಾಗುತ್ತಿದೆ.

  ಕಡಲಾಕ್ರಮಣವು (ಸಮುದ್ರದ ಅಲೆಗಳ ನುಗ್ಗುವಿಕೆ) ತೀವ್ರವಾಗಿ ಮುಂದುವರಿದಿದ್ದು, ಮಂಗಲ್ಪಾಡಿ ಪಂಚಾಯತ್‌ನ ಕರಾವಳಿ ಪ್ರದೇಶದಲ್ಲಿ ಇದರ ಪ್ರಭಾವ ಹೆಚ್ಚು ಕಂಡುಬಂದಿದೆ.

  ಕರಾವಳಿ ಪ್ರದೇಶದಲ್ಲಿ ಗಂಟೆಗೆ  65 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು