ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾರು ಚಾಯಿಸಿ ಬರುತ್ತಿದ್ದಾಗ ಹೃದಯಾಘಾತ; ನಿವೃತ್ತ ಸಿ.ಆರ್.ಪಿ.ಎಫ್.ಉದ್ಯೋಗಿ‌ ಮೃತ್ಯು


 ಕಾಞಂಗಾಡು: ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾರು ಚಾಯಿಸಿ ಬರುತ್ತಿದ್ದಾಗ ಹೃದಯಾಘಾತ. ನೀಲೇಶ್ವರದ ಮಾಜಿ ಸಿ.ಆರ್.ಪಿ.ಎಫ್ ಉದ್ಯೋಗಿ ನಿಧನ. ನೀಲೇಶ್ವರದ ಕಿಯಕ್ಕನ್ ಕೊಳುವಲ್ ನಿವಾಸಿ ಎರುವಟ್ಟು ಪಟ್ಟವಳಪ್ಪಿಲ್ ನಾರಾಯಣನ್ ನಾಯರ್ (74) ನಿಧನರಾಗಿದ್ದಾರೆ. ನಿನ್ನೆ (ಗುರುವಾರ) ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ತಳಿಪರಂಬದಿಂದ ಕುಟುಂಬ ಸಮೇತ ನೀಲೇಶ್ವರದ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಲು ಕಾರಿನಲ್ಲಿ ಹೊರಟಿದ್ದರು. ನೀಲೇಶ್ವರಕ್ಕೆ ತಲುಪಿದಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ನೀಲೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ನೀಲೇಶ್ವರ ಎನ್.ಕೆ.ಬಿ.ಎಂ.ಎ.ಯು.ಪಿ. ಶಾಲಾ ಬಸ್ ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಪತ್ನಿ: ಉಷಾ. ಮಕ್ಕಳು: ವರ್ಷ, ನಿಷಾ. ಅಳಿಯಂದಿರು: ರಾಧಾಕೃಷ್ಣನ್ (ಕ್ಲಬ್ ಎಫ್‌ಎಂ, ಕಣ್ಣೂರು), ಶ್ರೀಜಿತ್ (ತ್ರಿಕ್ಕರಿಪುರ ಫಾರ್ಮರ್ಸ್ ಕೋ-ಆಪರೇಟಿವ್ ಬ್ಯಾಂಕ್).


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು