ಶ್ರೀ ಎಡನೀರು ಮಠದಲ್ಲಿ ಋಕ್ ಸಂಹಿತಾಯಾಗ ಆರಂಭ


ಬದಿಯಡ್ಕ: ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯರ ೬ನೇ ಚಾತುರ್ಮಾಸ್ಯ ವ್ರತಾಚರಣೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದ್ದು, ೩೩ನೇ ದಿನ ಭಾನುವಾರ ಸಂಜೆ ವೇದಮೂರ್ತಿ ವಸಂತ ಭಟ್ ನೆಲ್ಲಿತೀರ್ಥ ಅವರ ಆಚಾರ್ಯತ್ವ ಮತ್ತು ನೇತೃತ್ವದಲ್ಲಿ ಅರಣಿ ಮಥನದ ಮೂಲಕ ಅಗ್ನಿಜನನ ಮಾಡಲಾಯಿತು. ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಸೋಮವಾರ ಬೆಳಗ್ಗೆ ವೇದಘೋಷಗಳೊಂದಿಗೆ ಯಾಗ ಆರಂಭವಾಯಿತು. ಸೆ.೬ರಂದು ಬೆಳಗ್ಗೆ ೧೦.೩೦ಕ್ಕೆ ಯಾಗದ ಮಹತ್ವದ ಕುರಿತು ವಿದ್ವಾನ್ ಪಂಜ ಭಾಸ್ಕರ ಭಟ್ ವಿಶೇಷ ಉಪನ್ಯಾಸ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ ೧೧ ಗಂಟೆಗೆ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು