ಬದಿಯಡ್ಕ ಬಂಟರ ಸಂಘದ ಆಶ್ರಯದಲ್ಲಿ ಆಟಿದ ಲೇಸ್


 

ಬದಿಯಡ್ಕ:  ತುಳುನಾಡಿನಲ್ಲಿ ಬಂಟರ ಆಚಾರಗಳು ಸಾರ್ವಕಾಲಿಕ ಬದಿಯಡ್ಕ ಬಂಟರ ಸಂಘದ ಆಶ್ರಯದಲ್ಲಿ ಆಟಿದ ಲೇಸ್ ಕಾರ್ಯಕ್ರಮ ಇರಾ ಸಭಾ ಭವನ ವಲಮಲೆಯಲ್ಲಿ ಜರಗಿತು.


ಸಭಾ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಬಂಟರ ಅಧ್ಯಕ್ಷ ಅಡ್ವ್ ಐ ಸುಬ್ಬಯ್ಯ ರೈ ಉದ್ಘಾಟಿಸಿದರು. ಅವರು ಮಾತನಾಡಿ ತುಳುನಾಡಿನಲ್ಲಿ ಬಂಟರು  ರಕ್ತಗತವಾಗಿ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಎಲ್ಲ ಕ್ಷೇತ್ರದಲ್ಲಿ ಮುಂದೆ ನಿಂತು  ಸಮಾಜದ ಅಭಿವೃದ್ಧಿಗೆ ತೊಡಗಿ ಕೊಂಡವರು.. ಬದಿಯಡ್ಕ ಬಂಟರ ಸಂಘದ ಮೂಲಕ ಬಂಟರ ಆಚಾರ ವಿಚಾರ ಸಂಸ್ಕೃತಿಯನ್ನು ಯುವತಲೆ ಮಾರಿಗೆ ಮನವರಿಕೆ ಮಾಡುವ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.

ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ಶ್ರೀ ನಿರಂಜನ್ ರೈ ಪೆರಡಾಲ   ಅಧ್ಯಕ್ಷತೆ ವಹಿಸಿದ್ದರು.

ಕಾಸರಗೋಡು ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಶ್ರೀ ಚಂದ್ರಹಾಸ ರೈ ಪೆರಡಾಲ ಗುತ್ತು, ಕೋಶಾಧಿಕಾರಿ ಶ್ರೀ ಚಿದಾನಂದ ಆಳ್ವ, ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಆಟಿ ತಿಂಗಳ ಬಂಟರ ಆಚರಣೆಗಳ ಬಗ್ಗೆ ಡಾ. ಯತೀಶ್ ಕುಮಾರ್ ರೈ ಉಪನ್ಯಾಸ ನೀಡಿದರು.ಬಂಟರು ಪ್ರಕೃತಿ ಆರಾಧಕರಾಗಿದ್ದರು.. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು  ಬಂಟರ ಆಚಾರ ವಿಚಾರಗಳು ಸಾರ್ವಕಾಲಿಕವಾಗಿದೆ ಎಂದು ಹೇಳಿದರು..

ಕುಂಬಳೆ ಫಿರ್ಕಾ ಪ್ರಧಾನ ಕಾರ್ಯದರ್ಶಿ ಶ್ರೀ ಅಶೋಕ್ ರೈ ಕೊರೆಕ್ಕನ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮೊಕ್ತೇಸರ ಶ್ರೀ ಜಗನ್ನಾಥ ರೈ ಪೆರಡಾಲ ಗುತ್ತು, ಕುಂಬಳೆ ಫಿರ್ಕಾ ಜತೆ ಕಾರ್ಯದರ್ಶಿ

ಶ್ರೀ ರವೀಂದ್ರನಾಥ ಶೆಟ್ಟಿ  ವಲಮಲೆ, ಗಿರೀಶ ರೈ , ಶ್ರೀ ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನ ಒಲಮಲೆ ಇದರ ಅಧ್ಯಕ್ಷ ಶ್ರೀ ಗಂಗಾಧರ ಆಳ್ವ ಪೆರಡಾಲ, ಕೇರಳ ಬ್ಯಾಂಕ್ ಬದಿಯಡ್ಕ ಬದಿಯಡ್ಕ ಬಂಟರ ಸಂಘದ ಉಪಾಧ್ಯಕ ಶ್ರೀ ಜಗನ್ನಾಥ ರೈ ಕೊರೆಕ್ಕನ, ಸಂತೋಷ್ ಕುಮಾರ್ ಶೆಟ್ಟಿ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು..

ವಿವಿಧ ಆಟೋಟ ಸ್ಪರ್ಧೆಗಳು, ವಿಜೇತರಿಗೆ ಬಹುಮಾನ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯರಿಗೆ ಗೌರವರ್ಪಣೆ,ಆಟಿ ತಿಂಗಳ ವಿವಿಧ ತಿಂಡಿ ತಿನಿಸುಗಳ ಪ್ರದರ್ಶನ ಬಂಟರ ಶೈಲಿಯ ಉಪಹಾರ  ಏರ್ಪಡಿಸಲಾಗಿತ್ತು.. ಪ್ರಧಾನ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿಬೇಳ ಸ್ವಾಗತಿಸಿದರು, ಕೋಶಧಿಕಾರಿ ದಯಾನಂದ ರೈ ಮೇಗಿನ ಕಡಾರು ಧನ್ಯವಾದ ಹೇಳಿದರು.ಅಶ್ವಿನಿ ಪ್ರದೀಪ್ ಶೆಟ್ಟಿ ಬೇಳ ಕಾರ್ಯಕ್ರಮ ನಿರ್ವಹಿಸಿದರು..

ಕುಮಾರಿ ಶ್ರದ್ಧಾ ರೈ ಮೇಗಿನ ಕಡಾರು ಪ್ರಾರ್ಥನೆ ಹಾಡಿದರು..

 ಬಂಟರ ಮೂಲಕ ಕಸುಬು ಕೃಷಿಯಾಗಿದ್ದು .. ನಮ್ಮ ಹಿರಿಯರು ಪ್ರಕೃತಿ ಆರಾಧಕರಾಗಿದ್ದರು.. ಕೃಷಿ ಕಸುಬಿನಿಂದಜೀವನ ಸಾಗಿಸಿದವರು.. ನಮ್ಮ ಹಿರಿಯರು  ಆಚರಿಸಿಕೊಂಡು ಬಂದ ಆಚಾರ ವಿಚಾರ ಸಂಸ್ಕೃತಿಯನ್ನು ನಮ್ಮ ಯುವ ಪೀಳಿಗೆಯವರು ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯ ಈ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಮನವರಿಕೆ ಮಾಡುವ ಕೆಲಸ ಅಗತ್ಯವಾಗಿದೆ.. 

ಶ್ರೀ ನಿರಂಜನ್ ರೈ ಪೆರಡಾಲ (ಅಧ್ಯಕ್ಷರು ಬದಿಯಡ್ಕ ಬಂಟರ ಸಂಘ )

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು