ಅಸೌಖ್ಯದಿಂದಾಗಿ ಚೆಂಗಳ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಬೆಳ್ಳೂರು ಬಜ ನಿವಾಸಿ ಮೃತ್ಯು



 ಬೆಳ್ಳೂರು: ಅಸೌಖ್ಯದಿಂದಾಗಿ ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಯುವಕ ಮೃತಪಟ್ಟ ಘಟನೆ ನಡೆದಿದೆ. ಬೆಳ್ಳೂರು ಬಜ ನಿವಾಸಿ ದಿವಂಗತರಾದ ಅಪ್ಪಕುಞ-ಮಾಧವಿ ದಂಪತಿಯ ಪುತ್ರ ಬಾಲಚಂದ್ರ(47) ಮೃತಪಟ್ಟ ಯುವಕ. ಇವರನ್ನು ಅಸೌಖ್ಯ ನಿಮಿತ್ತ ನಿನ್ನೆ (ಶುಕ್ರವಾರ) ಮದ್ಯಾಹ್ನ ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ರಾತ್ರಿ ಇವರು ಕೊನೆಯುಸಿರೆಳೆದರು. ಮೃತರು ಪತ್ನಿ  ಪುಷ್ಪ, ಮಕ್ಕಳಾದ ಅನುಷ, ತ್ರಿಶಾನ್, ಸಹೋದರ ಸಹೋದರಿಯರಾದ ಕೃಷ್ಣ, ನಾರಾಯಣ, ಉದಯ, ಯಶೋಧ ಎಂಬಿವರನ್ನು ಅಗಲಿದ್ದಾರೆ. ಮೃತರು ಶೇಂದಿ (ಮೂರ್ತೇದಾರ) ಇಳಿಸುವ ಕಾರ್ಮಿಕರಾಗಿದ್ದರು


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು