ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ , ಜನ ನಾಯಕ ಉಮ್ಮನ್ ಚಾಂಡಿಯವರ ಮೂರನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆಸಲಾಯಿತು. ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅವರ ಅಧ್ಯಕ್ಷತೆಯಲ್ಲಿ ಉಮ್ಮನ್ ಚಾಂಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನೇತಾರರಾದ ಜಗನ್ನಾಥ ರೈ , ತಿರುಪತಿ ಕುಮಾರ್ ಭಟ್ , ರಾಮ ಪಟ್ಟಾಜೆ , ಶಾಫಿ ಗೋಳಿಯಡ್ಕ , ಶ್ರೀನಾಥ್ ಬದಿಯಡ್ಕ , ನಿರಂಜನ ರೈ, ಲೋಹಿತಾಕ್ಷನ್ , ನಾರಾಯಣ ಭಂಡಾರಿ, ಕೇಶವ ಬದಿಯಡ್ಕ , ಚಂದ್ರಹಾಸನ್ ಮಾಸ್ಟರ್ , ಗೋಪಾಲ.ಡಿ, ಹಾಗೂ ಮಂಡಲ , ವಾರ್ಡು , ಬೂತು ತಲ ನೇತಾರರು ಭಾಗವಹಿಸಿದರು.
Tags
ಬದಿಯಡ್ಕ
