ರಾಷ್ಟ್ರೀಯ ವಯೋಶ್ರೀ ಯೋಜನೆ; ಮಧೂರಿನಲ್ಲಿ ಉಚಿತ ಸಹಾಯೋಪಕರಣ ನೋಂದಣಿ ಶಿಬಿರ

ಮಧೂರು: ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗರಿಗೆ ಉಚಿತವಾಗಿ ಸಹಾಯ ಉಪಕರಣಗಳನ್ನು ವಿತರಿಸುವ ಕೇಂದ್ರ ಸರ್ಕಾರದ 'ರಾಷ್ಟ್ರೀಯ ವಯೋಶ್ರೀ' ಯೋಜನೆಯ ಸ್ಕ್ರೀನಿಂಗ್ ಕ್ಯಾಂಪ್ ಅನ್ನು ಆಯೋಜಿಸಲಾಗಿತ್ತು. ಪ್ರಧಾನಮಂತ್ರಿ ದಿವ್ಯಾಂಶ ಕೇಂದ್ರ ಮತ್ತು ವಿಕಸಿತ ಕೇರಳ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್ ಇವರ ಸಂಯುಕ್ತಾಶ್ರಯದಲ್ಲಿ ಉಳಿಯತ್ತಡ್ಕದ ಅಟಲ್‍ಜಿ ಕಮ್ಯುನಿಟಿ ಹಾಲ್‍ನಲ್ಲಿ ನಡೆದ ಸ್ಕ್ರೀನಿಂಗ್ ಕ್ಯಾಂಪ್ ಅನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು.


ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗರಿಗೆ ಉಚಿತವಾಗಿ ಸಹಾಯ ಉಪಕರಣಗಳನ್ನು ವಿತರಿಸುವ ಈ ಯೋಜನೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾಡಜನರ ಮೇಲಿರುವ ಕಾಳಜಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಅಶ್ವಿನಿ ಹೇಳಿದರು.

ಬಿಜೆಪಿ ಮಧೂರು ಈಸ್ಟ್ ಏರಿಯಾ ಅಧ್ಯಕ್ಷ ಮಹೇಶ್ ಮಧೂರು ಅಧ್ಯಕ್ಷತೆ ವಹಿಸಿದ್ದರು.

ದಿವ್ಯಾಂಶ ಕೇಂದ್ರವನ್ನು ಪ್ರತಿನಿಧಿಸಿ ಡಾ. ಗೋಕುಲ್, ಅಭಿನವ್, ಆಡಿಯೋಲಾಜಿಸ್ಟ್ ಡಾ. ಮಧುಶ್ರೀ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಸೆಲ್ ಕೋಆರ್ಡಿನೇಟರ್ ಸುಕುಮಾರ್ ಕುದ್ರೆಪ್ಪಾಡಿ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶಾನ್‌ಭಾಗ್, ಉಪಾಧ್ಯಕ್ಷ ಭಾನುಪ್ರಕಾಶ್, ಮಧೂರು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಪ್ರತಿನಿಧಿ ಪ್ರಮೀಳಾ ಮಜಲ್, ಮಧೂರು ಈಸ್ಟ್ ಏರಿಯಾ ಪ್ರಧಾನ ಕಾರ್ಯದರ್ಶಿ ಅನಿಲ್ ಪಕ್ಕಳ ಮಾತನಾಡಿದರು.

 ನಾಳೆ (ಜುಲೈ 22 ರಂದು) ಮುಳ್ಳೇರಿಯ ಶ್ರೀ ಗಣೇಶ್ ಕಲಾಮಂದಿರ, ಜುಲೈ 23 ರಂದು ಕುಟ್ಟಿಕೋಲು ಸೋಪಾನಂ ಆಡಿಟೋರಿಯಂ ಮತ್ತು ಜುಲೈ 24 ರಂದು ಬಳಾಂತ್ಕೋಡು ಮಿಲ್ಮಾ ಹಾಲ್‍ನಲ್ಲಿ ವಯೋಶ್ರೀ ಯೋಜನೆಯ ಸ್ಕ್ರೀನಿಂಗ್ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು