ಕಂಠರರ್ ರಾಜೀವರ್ ಅವರ ಪುತ್ರ ಬ್ರಹ್ಮದತ್ತನ್ ಶಬರಿಮಲೆಯ ನೂತನ ತಂತ್ರಿ



ತಿರುವನಂತಪುರಂ:  ಕಂಠರರ್ ರಾಜೀವರ್ ಅವರ ಪುತ್ರ ಬ್ರಹ್ಮದತ್ತನ್ ಶಬರಿಮಲೆಯಲ್ಲಿ ತಂತ್ರಿಯಾಗಲಿದ್ದಾರೆ.

ತಿರುವಾಂಕೂರು ದೇವಸ್ವಂ ಮಂಡಳಿಯ (ಬೋರ್ಡ್) ಕೇಂದ್ರ ಕಚೇರಿಯಲ್ಲಿ ಇಂದು (ಶನಿವಾರ) ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್, ಮಂಡಳಿಯ ಸದಸ್ಯರಾದ ಕೆ. ರಾಜು ಮತ್ತು ಪಿ.ಡಿ. ಸಂತೋಷ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಚಿಂಗಂ (ಸಿಂಹ ಮಾಸ) 1 ರಿಂದ ಬ್ರಹ್ಮದತ್ತನ್ ತಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಮ್ಮ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ತಮ್ಮ ಬದಲಿಗೆ ತಾಂತ್ರಿಕ ಸ್ಥಾನವನ್ನು ಮಗನಿಗೆ ನೀಡಬೇಕೆಂದು ಕೋರಿ ಕಂಠರರ್ ರಾಜೀವರ್. ದೇವಸ್ವಂ ಮಂಡಳಿಗೆ ಪತ್ರ ನೀಡಿದ್ದರು.

ಸಿಂಹ ಮಾಸದಿಂದ  ಮುಂದಿನ ಕರ್ಕಡಕಂ ತಿಂಗಳವರೆಗೆ ತಾಯಮಣ್ ಮಠದ ಎರಡು ಕುಟುಂಬಗಳು ಸರದಿಯ ಆಧಾರದ ಮೇಲೆ ಶಬರಿಮಲೆಯಲ್ಲಿ ತಾಂತ್ರಿಕ ಕಾರ್ಯಗಳನ್ನು ನೆರವೇರಿಸುತ್ತವೆ. ಹಿರಿಯ ತಂತ್ರಿ ಕಂಠರರ್ ಮೋಹನರರ್, ಅವರ ಪುತ್ರ ಕಂಠರರ್ ಮಹೇಶ್ ಮೋಹನರರು ಪ್ರಸ್ತುತ ತಂತ್ರಿಯಾಗಿದ್ದಾರೆ. ಅವರ ಅಧಿಕಾರಾವಧಿಯು ಆಗಸ್ಟ್ 2 ರಂದು ನಿರಪುತ್ತರಿ ಪೂಜೆಗಳೊಂದಿಗೆ ಮುಕ್ತಾಯಗೊಳ್ಳಲಿದೆ. ಹೈಕೋರ್ಟ್ ಅನುಕೂಲಕರ ನಿರ್ಧಾರ ಕೈಗೊಂಡಿರುವುದರಿಂದ ಚಿಂಗಂ (ಸಿಂಹ) ತಿಂಗಳ ಪೂಜೆಗಳಿಗಾಗಿ ಗರ್ಭಗುಡಿಯ ಬಾಗಿಲು ತೆರೆಯುವ ಆಗಸ್ಟ್ 16 ರಿಂದ ಕಂಠರರು ಬ್ರಹ್ಮದತ್ತನ್ ನೂತನ ತಂತ್ರಿಯಾಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು