ಪೋಕ್ಸೋ ಪ್ರಕರಣದ ಆರೋಪಿಯ ಮನೆಗೆ ತಂಡದಿಂದ ದಾಳಿ; ಕಿಟಿಕಿ, ಬಾಗಿಲು ದ್ವಂಸ, ಮಹಿಳೆಗೆ ಗಾಯ


  ಪೋಕ್ಸೋ (POCSO) ಪ್ರಕರಣದ ಆರೋಪಿಯ ಮನೆ ಮೇಲೆ ತಂಡವೊಂದು ದಾಳಿ ನಡೆಸಿದ ಘಟನೆ ಪಡನ್ನದಲ್ಲಿ ನಡೆದಿದೆ. ಮನೆಯ ಕಿಟಕಿ ಗ್ಲಾಸ್‌ಗಳನ್ನು ಪುಡಿಪುಡಿ ಮಾಡಲಾಗಿದೆ. ಮನೆಯಲ್ಲಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೋಕ್ಸೋ ಪ್ರಕರಣದ ಆರೋಪಿ ಅಬೂಬಕ್ಕರ್ ಎಂಬವವರ   ಪಡನ್ನ  ಗಣೇಶ್‌ಮುಕ್ಕಿನಲ್ಲಿರುವ ಮನೆಗೆ ನಿನ್ನೆ (ಶುಕ್ರವಾರ) ಮಧ್ಯಾಹ್ನದ ವೇಳೆಗೆ ದಾಳಿ ನಡೆದಿದೆ. ಮನೆಗೆ ಅಕ್ರಮವಾಗಿ ನುಗ್ಗಿದ ಗುಂಪೊಂದು ಕಿಟಕಿ ಗ್ಲಾಸ್‌ಗಳನ್ನು ಹೊಡೆದು ಹಾಕಿ ಧ್ವಂಸಗೊಳಿಸಿದೆ. ಮನೆಯಲ್ಲಿದ್ದ ಮಹಿಳೆಯನ್ನು ಅಶ್ಲೀಲ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗಾಯಗೊಂಡ ಓರ್ವ ಮಹಿಳೆ ಚೆರುವತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಕ್ಷಯ್ ಮತ್ತು ವಿಜಯ್ ಎಂಬಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು