ಬೋವಿಕಾನ: 84 ವರ್ಷದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾನತ್ತೂರ್ ಮೂಡೇಂವೀಟಿಲ್ ಕುಂಞಿರಾಮನ್ (84) ಮೃತಪಟ್ಟವರು. ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದ ಕುಂಞಿರಾಮನ್ ಅವರು ಇಂದು ಬೆಳಿಗ್ಗೆ ಕಾಣದಾದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮನೆಯ ಹಿಂಭಾಗದಲ್ಲಿ ನೇಷು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.. ಘಟನೆಗೆ ಸಂಬಂಧಿಸಿದಂತೆ ಆದೂರು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ರಾಧಾ, ಗೀತಾ, ಸುನಿತಾ. ಅಳಿಯಂದಿರಾದ ಮುರಳಿ, ಚಂದ್ರನ್, ದಿವಂಗತ ಕುಮಾರನ್.ಸಹೋದರರ ಸಹೋದರಿಯರಾದ ಜಾನಕಿ, ಕೊರಪ್ಪಾಳು, ದಿವಂಗತ ಸುಕುಮಾರನ್ ಎಂಬಿವರನ್ನು ಅಗಲಿದ್ದಾರೆ.
Tags
ಮುಳಿಯಾರು
