ಕಾಸರಗೋಡು: ಸ್ಕೂಟರ್‌ನಿಂದ ಬಿದ್ದು ಶಾಲಾ ಅಡುಗೆ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಪೆರುಂಬಳ ಕಣಿಯಾಲ ನಿವಾಸಿ ದಿವಂಗತ ರಾಜೇಂದ್ರ ಅವರ ಪತ್ನಿ ಎಂ. ನಾರಾಯಣಿ (61) ಮೃತಪಟ್ಟವರು. ಇವರು ಬೆದಿರೆ ಪಿ.ಟಿ.ಎಂ. ಎ.ಯು.ಪಿ. ಶಾಲೆಯ ಅಡುಗೆ ಕಾರ್ಮಿಕರಾಗಿದ್ದರು. ನಿನ್ನೆ
(ಬುಧವಾರ) ಬೆಳಿಗ್ಗೆ ಪೆರುಂಬಳ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ಸ್ಕೂಟರ್‌ನಿಂದ ಬಿದ್ದ ಇವರನ್ನು ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕಿಸಲು ಸಾಧ್ಯವಾಗಲಿಲ್ಲ.
ಅಂತ್ಯಸಂಸ್ಕಾರವು ಇಂದು (ಗುರುವಾರ) ಮಧ್ಯಾಹ್ನ ಮನೆಯ ಆವರಣದಲ್ಲಿ ನಡೆಯಲಿದೆ. ಮೃತರು ದಿವಂಗತ ಕುಞಂಬು ನಾಯರ್ ಮತ್ತು ಎಂ. ಚೋಯಿಚ್ಚಿಯಮ್ಮ ಅವರ ಪುತ್ರಿಯಾಗಿದ್ದಾರೆ. ಮೃತರು ತಾಯಿ, ಮಕ್ಕಳಾದ ಎಂ. ಸ್ವಪ್ನಾ, ಸೌಮ್ಯಾ,ಅಳಿಯ ಶ್ರೀರಾಗ್ (ಬೆಂಗಳೂರು),ಸಹೋದರ-ಸಹೋದರಿಯರಾದ ಎಂ. ಪುರುಷೋತ್ತಮನ್, ಯಶೋದಾ, ಲಕ್ಷ್ಮೀಕುಟ್ಟಿ (ನರ್ಸ್), ಕಾಮಿನಿ ಎಂಬಿವರನ್ನು ಅಗಲಿದ್ದಾರೆ.
Tags
ಕಾಸರಗೋಡು
