ಆಟವಾಡುತ್ತಿರುವ ಮಧ್ಯೆ ಮನೆಯ ಸಮೀಪದ ತೋಡಿಗೆ ಬಿದ್ದು 5 ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕೋಜಿಕ್ಕೋಡು ನರಿಕ್ಕುನಿಯ ಕಾರುಕುಳಂಗರ ವಾಸಿಸುತ್ತಿರುವ ಕೊಟ್ಟಯೋಟ್ಟು ತಾೞಂ ವೇಲಾಕಂಡಿಯ ರವೂಫ್-ಸಬೀನಾ ದಂಪತಿಯ ಪುತ್ರಿ ಹನಾ ಫಾತಿಮಾ (5) ಮೃತಪಟ್ಟ ಬಾಲಕಿ.
ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಮನೆಯ ಪಕ್ಕದಲ್ಲಿದ್ದ ಹಳ್ಳಕ್ಕೆ ಹನಾ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಳು. ತಕ್ಷಣವೇ ಮಗುವನ್ನು ಮೇಲಕೆತ್ತಿ ಎಳೇಟ್ಟಿಲ್ ವಟ್ಟೋಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.
ಹನಾ ಫಾತಿಮಾ ಮೂರ್ಖನ್‌ಕುಂಡ್ ನೆಡಿಯನಾಡ್ ಜಿ.ಎಮ್.ಎಲ್.ಪಿ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿನಿಯಾಗಿದ್ದಳು. ಮೃತದೇಹವನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ (ಮೋರ್ಚುರಿ) ರವಾನಿಸಲಾಗಿದೆ.
Tags
ಕೋಜಿಕ್ಕೋಡ್
