ಕಾಸರಗೋಡು: ಸಮಾಜದ ಆಚಾರ್ಯರನ್ನು ಮತ್ತು ಗುರುವರ್ಯರನ್ನು ರಾಷ್ಟ್ರಮಟ್ಟದಲ್ಲಿ ಗೌರವಿಸುವ ಗುರುಪೂಜಾ ದಿನಾಚರಣೆಯ ಭಾಗವಾಗಿ ಬಿಜೆಪಿ ಕುಂಬಳೆ ಮಂಡಲ ಸಮಿತಿಯ ನೇತೃತ್ವದಲ್ಲಿ ಕೊಂಡೇವೂರು ನಿತ್ಯಾನಂದ ಯೋಗಾಶ್ರಮದ ಮಠಾಧಿಪತಿ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಯಕ್ಷಗಾನ ಕಲಾವಿದ ರಾಮ ಅವರನ್ನು ಸನ್ಮಾನಿಸಲಾಯಿತು.
ಕೊಂಡೇವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ ಚಂದ್ರ ಭಂಡಾರಿ, ಜಿಲ್ಲಾ ಉಪಾಧ್ಯಕ್ಷರಾದ ಪಿ. ರಮೇಶ್, ಮುರಳೀಧರ, ಕುಂಬಳೆ ಮಂಡಲ ಅಧ್ಯಕ್ಷ ವಿಕ್ರಮ್ ಪೈ, ಮಂಡಲ ಉಪಾಧ್ಯಕ್ಷರಾದ ಬಾಲಕೃಷ್ಣ ಅಂಬಾರ್, ಪದ್ಮನಾಭ, ಮಂಡಲ ಕಾರ್ಯದರ್ಶಿ ಗಣೇಶ್, ಮಂಡಲ ಕೋಶಾಧಿಕಾರಿ ರಾಧಾಕೃಷ್ಣ ಮಡ್ವ, ಎಸ್‌ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ನಾರಾಯಣ, ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ವತ್ಸರಾಜ್ ಕೆ.ಪಿ., ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಪುಣಿಯೂರು, ಕುಂಬಳೆ ಮಂಡಲ ಕಾರ್ಯದರ್ಶಿ ದಿನೇಶ್ ಚೆರುಗೋಳಿ, ಎಣ್ಮಕಜೆ ಪಂಚಾಯತ್ ಸಮಿತಿ ಅಧ್ಯಕ್ಷ ರಮಾನಂದ ಎಡಮಲೆ, ಕುಂಬಳೆ ನಾರ್ತ್ ಏರಿಯಾ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರೈ, ಸೌತ್ ಏರಿಯಾ ಸಮಿತಿ ಅಧ್ಯಕ್ಷ ಸುಜಿತ್ ರೈ, ಮಾಜಿ ಪಂಚಾಯತಿ ಜನಪ್ರತಿನಿಧಿ ಸುಧಾ ಗಣೇಶ್, ಶ್ರೀಕಾಂತ್, ಸದಾಶಿವ ಬಿ. ಉಪಸ್ಥಿತರಿದ್ದರು.
Tags
ಕುಂಬಳೆ

