ಅಗಲಿದ ಅಶೋಕ್ ಭಟ್ ಗುಲುಗುಂಜಿ ಅವರಿಗೆ ಸರ್ವಪಕ್ಷೀಯ ಸಂತಾಪ


ಕುಂಬ್ಡಾಜೆ: ಭಾರತೀಯ ಜನತಾ ಪಾರ್ಟಿ, ಕುಂಬಡಾಜೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ದಿವಂಗತ ಶ್ರೀ ಅಶೋಕ್ ಭಟ್ ಅವರಿಗೆ ಸರ್ವಪಕ್ಷೀಯ ಸಂತಾಪ ಸೂಚಕ ಸಭೆ ಮಾರ್ಪನಡ್ಕ ಪೇಟೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಸಮಿತಿ ಅಧ್ಯಕ್ಷ  ಶಶಿಧರ ತೆಕ್ಕೆಮೂಲೆ ವಹಿಸಿದ್ದರು.

 ಬಿಜೆಪಿ ಕೊಝಿಕ್ಕೋಡ್ ವಲಯ ಪ್ರಧಾನ ಕಾರ್ಯದರ್ಶಿ ಶ್ರೀ ಸುಧಾಮ ಗೋಸಾಡ, ರಾಜ್ಯ ಸಮಿತಿ ಸದಸ್ಯ ಶ್ರೀ ಹರೀಶ್ ನಾರಂಪಾಡಿ, ಮಂಡಲ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಮುಂಡೋಲ್ ಮೂಲೆ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ರವೀಂದ್ರ ರೈ ಗೋಸಾಡ, ಸಿಪಿಎಂ ಮುಖಂಡ ಶ್ರೀ ನಾರಾಯಣ ನಂಬ್ಯಾರ್, ಮುಸ್ಲಿಂ ಲೀಗ್ ಮುಖಂಡ ಶ್ರೀ ಎಸ್. ಮಹಮ್ಮದ್, ಕಾಂಗ್ರೆಸ್ ಮುಖಂಡ ಶ್ರೀ ಜೋನಿ ಕ್ರಾಸ್ತ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಯಶೋದಾ ಎನ್., ಪಂಚಾಯತ್ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಮೋದ್ ಭಂಡಾರಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀ ರಮೇಶ್ ಪದ್ಮಾರ್, ವ್ಯಾಪಾರಿ ಏಕೋಪನಾ ಸಮಿತಿಯ ಸದಸ್ಯ ಶ್ರೀ ಗೋಪಾಲ ಮಣಿಯಾಣಿ, ಜನಪ್ರತಿನಿದಿಗಳು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದು, ದಿವಂಗತರಿಗೆ ನುಡಿನಮನ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು