ಕಾಸರಗೋಡು ಲೈಟ್‌ಹೌಸ್ ಕಡಲತೀರದಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ತಲೆಯಿಲ್ಲದ ಮೃತದೇಹವೊಂದು ಪತ್ತೆಯಾಗಿದೆ. ಇಂದು (ಶನಿವಾರ) ಬೆಳಗ್ಗೆ ಸುಮಾರು ಒಂದೂವರೆ ತಿಂಗಳಷ್ಟು ಹಳೆಯದಾದ ಶವ ತೇಲಿ ಬಂದಿದೆ. ಮೀನುಗಾರರು ಈ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ಮೃತದೇಹದ ತಲೆ ಕತ್ತರಿಸಿದ ಸ್ಥಿತಿಯಲ್ಲಿದೆ. ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಟೌನ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹವು ಪುರುಷನದ್ದಾಗಿದೆ. ತಲೆ ಬೇರ್ಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಳುಗಿ ಸಾವನ್ನಪ್ಪಿದ್ದರೆ ಕೇವಲ ತಲೆ ಮಾತ್ರ ಮೃತದೇಹದಿಂದ ಬೇರ್ಪಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಎಲ್ಲಾದರೂ ಹೂತುಹಾಕಲಾಗಿದ್ದ ಮೃತದೇಹವು ಅಲೆಗಳ ಹೊಡೆತಕ್ಕೆ ಸಿಲುಕಿ ತೇಲಿ ಬಂದಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
ಕಾಲಿನ ಮಾಂಸದ ಭಾಗಗಳೂ ಸಹ ಕರಗಿ ಹೋಗಿದ್ದು, ಮೂಳೆಗಳು ಹೊರಗೆ ಕಾಣಿಸುವ ಸ್ಥಿತಿಯಲ್ಲಿ ಮೃತದೇಹವಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸುತ್ತಿದ್ದಾರೆ...
Tags
ಕಾಸರಗೋಡು
