ಬದಿಯಡ್ಕ ನಿವಾಸಿ ಗುಲ್ಬರ್ಗಾದಲ್ಲಿ ಹೃದಯಾಘಾತದಿಂದ ಮೃತ್ಯು


 ಬದಿಯಡ್ಕ: ಬದಿಯಡ್ಕ ಸಮೀಪದ ಕಂಗಣ್ಣಾರು ನಿವಾಸಿ ಗುಲ್ಬರ್ಗದಲ್ಲಿ ಹೃದಯಾಘಾತದಿಂದ ಮೃತರಾದ ಘಟನೆ ನಡೆದಿದೆ. ಕಂಗಣ್ಣಾರು ನಿವಾಸಿ ಮುಹಮ್ಮದ್ ಇಸ್ಮಾಯಿಲ್(65) ಮೃತಪಟ್ಟವರು.  ವ್ಯಾಪಾರ ಸಂಬಂಧ ಇವರು ಗುಲ್ಬರ್ಗಾಕೆ ತೆರಳಿದ್ದರು. ಅಲ್ಲಿನ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಉಮೈರ, ಮಕ್ಕಳಾದ ಆಯಿಷ ಮುನವ್ವರ, ಫಾತಿಮ, ಅಳಿಯಂದಿರಾದ ಮುಹಮ್ಮದ್ ಇಮ್ರಾನ್, ಸುಹೈಲ್, ಸಹೋದರ ಸಹೋದರಿಯರಾದ  ಇಬ್ರಾಹಿಂ, ಅಬ್ಬಾಸ್, ಅಬ್ದುಲ್ಲ, ಸಕೀನ,  ಬೀಫಾತಿಮ, ನಫೀಸ ಎಂಬಿವರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು