ವಾರದಲ್ಲಿ ಐದು ದಿನ ಡ್ರೈವಿಂಗ್ ಟೆಕ್ಸ್ಟ್, ಸ್ಲಾಟ್‌ಗಳ ಸಂಖ್ಯೆ 50ಕ್ಕೆ ಏರಿಕೆ


 ತಿರುವನಂತಪುರಂ: ಚಾಲನಾ ಪರೀಕ್ಷೆಗಳು (Driving Tests) ತಡವಾಗುತ್ತಿವೆ ಎಂಬ ದೂರಿನನ್ವಯ ಮೋಟಾರು ವಾಹನ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಮುಂದಿನ ಮೂರು ತಿಂಗಳ ಕಾಲ ವಾರಕ್ಕೆ 5 ದಿನಗಳ ಕಾಲ ಚಾಲನಾ ಪರೀಕ್ಷೆ ನಡೆಸಲು ಮತ್ತು ಸ್ಲಾಟ್‌ಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲು ಇಲಾಖೆ ನಿರ್ಧರಿಸಿದೆ.

ಲರ್ನರ್ಸ್ ಪರೀಕ್ಷೆಯನ್ನು (Learners Test) ಸಹ ವಾರದ 5 ಕೆಲಸದ ದಿನಗಳಲ್ಲಿ ನಡೆಸಲಾಗುವುದು. ಲರ್ನರ್ಸ್ ಲೈಸೆನ್ಸ್ ಪರೀಕ್ಷೆಗಾಗಿ 'ಫೇಶಿಯಲ್ ರೆಕಗ್ನಿಷನ್' (Facial Recognition) ಆಧಾರಿತ ದೃಢೀಕರಣವನ್ನು ಜಾರಿಗೆ ತರಲಾಗುವುದು. ಇವುಗಳ ಮೇಲ್ವಿಚಾರಣೆಗೆ ಡೆಪ್ಯುಟಿ ಟ್ರಾನ್ಸ್‌ಪೋರ್ಟ್ ಕಮಿಷನರ್ ಅವರನ್ನು ನೇಮಿಸಲಾಗಿದೆ. ಚಾಲನಾ ಪರೀಕ್ಷೆಯ ಜೊತೆಗೆ ಲರ್ನರ್ಸ್ ಪರೀಕ್ಷೆಗೂ ಸ್ಲಾಟ್‌ಗಳು ಸಿಗದಂತಾಗಿದ್ದರಿಂದ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪ್ರಕ್ರಿಯೆಗಳು ಬಿಕ್ಕಟ್ಟಿಗೆ ಸಿಲುಕಿದ್ದವು.

ಲರ್ನರ್ಸ್ ಪರೀಕ್ಷೆಗಾಗಿ ಮೂರರಿಂದ ನಾಲ್ಕು ತಿಂಗಳವರೆಗೆ ಕಾಯಬೇಕಾಗಿತ್ತು. ಇದರಿಂದಾಗಿ ಅನೇಕ ಜನರು ಲೈಸೆನ್ಸ್ ಪಡೆಯುವ ಪ್ರಯತ್ನವನ್ನೇ ಕೈಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು