ಬದಿಯಡ್ಕ ಗ್ರಾಮ ಪಂಚಾಯತಿನಲ್ಲಿ ಇಂಜಿನಿಯರ್, ಓವರ್ಸಿಯರ್ ಹುದ್ದೆಗಳ ನೇಮಕಾತಿ ನಡೆಸಿ! ಸ್ಥಳೀಯಾಡಳಿತ ಸಚಿವರನ್ನು ಬೇಟಿಯಾಗಿ‌ ಮನವಿ ಸಲ್ಲಿಸಿದ ಗ್ರಾಮ ಪಂಚಾಯತು ಅಧ್ಯಕ್ಷರು


 ತಿರುವನಂತಪುರಂ: ಬದಿಯಡ್ಕ ಗ್ರಾಮ ಪಂಚಾಯತು ಕಚೇರಿಯಲ್ಲಿ ಖಾಲಿ ಬಿದ್ದಿರುವ ಅಸಿಸ್ಟೆಂಟ್ ಇಂಜಿನಿಯರ್, ಓವರ್ಸಿಯರ್ ಹುದ್ದೆಗಳಿಗೆ ಕೂಡಲೇ ನೇಮಕಾತಿ ನಡೆಸಬೇಕೆಂದು ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ ಅವರು ಸ್ಥಳೀಯಾಡಳಿತೆ ಸಚಿವ ಕೆ.ಎಂ.ಶಾಜಿ ಅವರನ್ನು ವಿನಂತಿಸಿದರು. ತಿರುವನಂತಪುರಂ ಸೆಕ್ರೆಟರಿಯೇಟ್ ನಲ್ಲಿ ಸಚಿವರ ಕಚೇರಿಯಲ್ಲಿ ಸಚಿವರನ್ನು ಬೇಟಿಯಾಗಿ ಅವರು ಮನವಿ ಸಲ್ಲಿಸಿದರು. ಇಂಜಿನಿಯರ್, ಓವರ್ಸೀಯರ್ ಮೊದಲಾದ ಹುದ್ದೆಗಳು ಖಾಲಿ ಬಿದ್ದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಕಟ್ಟಡದ ನಂಬ್ರ, ಪರ್ಮಿಟ್, ವಾರ್ಷಿಕ ಯೋಜನೆಯ ಕೆಲಸಗಳು ಸಹ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ನಡೆಸಬೇಕು ಎಂದವರು ಒತ್ತಾಯಿಸಿದರು. ಈ ಬಗ್ಗೆ ಕೂಡಲೇ ಅಗತ್ಯದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು