ಕಾಸರಗೋಡು: ಜಿಲ್ಲೆಯ ವಿವಿಧ ಸಂಘಟನಾ ಮಂಡಲಗಳಲ್ಲಿ ಬಿಜೆಪಿ ಮಂಡಲ ಸಮಿತಿಗಳ ಆಶ್ರಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನದ ಅಧ್ಯಯನ ಶಿಬಿರಗಳು ನಾಳೆ (ಜುಲೈ 18) ಮತ್ತು 19ರಂದು ಜರುಗಲಿವೆ.
ಕುಂಬಳೆ ಸಂಘಟನಾ ಮಂಡಲದ ಅಧ್ಯಯನ ಶಿಬಿರವು ಎಣ್ಮಕಜೆ ಪಂಚಾಯತ್‌ನ ಪೆರ್ಲ ಶಂಕರ ಸದನದಲ್ಲಿ ನಡೆಯಲಿದೆ. ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಕೋಝಿಕೋಡ್ ಮೇಘಲಾ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಪಾಲ್ಗೊಳ್ಳಲಿದ್ದಾರೆ.
ತೃಕ್ಕರಿಪ್ಪುರ ಸಂಘಟನಾ ಮಂಡಲದ ಅಧ್ಯಯನ ಶಿಬಿರವು ಶ್ರೀ ಚಕ್ರಪಾಣಿ ವಿದ್ಯಾಮಂದಿರದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎ. ವೇಲಾಯುಧನ್ ಉದ್ಘಾಟಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸೆಲ್ ಕೋಆರ್ಡಿನೇಟರ್ ವಿ. ಕೆ. ಸಜೀವನ್ ಭಾಗವಹಿಸಲಿದ್ದಾರೆ.
ನೀಲೇಶ್ವರ ಸಂಘಟನಾ ಮಂಡಲದ ಅಧ್ಯಯನ ಶಿಬಿರವು ಚೀಮೇನಿ ಮುಂಡದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಎಂ. ಎಲ್. ಪಾಲ್ಗೊಳ್ಳಲಿದ್ದಾರೆ.
ಪ್ರತಿ ಅಧ್ಯಯನ ಶಿಬಿರದಲ್ಲೂ ವಿವಿಧ ಪಂಚಾಯತ್ ಏರಿಯಾಗಳಿಂದ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
