ಬದಿಯಡ್ಕ;- ಬದಿಯಡ್ಕ ಪಂಚಾಯತಿನ ಬಿಜೆಪಿ ಪೂರ್ವ ವಲಯ ಸಭೆಯು ಇಲ್ಲಿನ ಗಣೇಶ ಮಂದಿರ ಪರಿಸರದಲ್ಲಿ ನಡೆಯಿತು. ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಅವರು ಉದ್ಘಾಟಿಸಿದರು.
ಬಿಜೆಪಿ ಬದಿಯಡ್ಕ ಪೂರ್ವ ವಲಯ ಅಧ್ಯಕ್ಷ ಬಿ. ಉದನೇಶ್ವರ ಬದಿಯಡ್ಕ ಅಧ್ಯಕ್ಷತೆ ವಹಿಸಿದರು.
ನಂತರ ನೂತನ ಸಮಿತಿಯ ಘೋಷಣೆ ನಡೆಯಿತು.
ಅಧ್ಯಕ್ಷರಾಗಿ ಉದನೇಶ್ವರ ಬಿ, ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಗಂಗಾಧರ ಪಳ್ಳತ್ತಡ್ಕ, ಜಯಂತಿ ಚೆಟ್ಟಿಯಾರ್ ಕಾರ್ಯದರ್ಶಿಗಳಾಗಿ ಸುನೀಲ್ ಉಕ್ಕಿನಡ್ಕ,, ದೀಕ್ಷಿತ್ ಬದಿಯಡ್ಕ ಹಾಗೂ ಹದಿನಾರು ಸದಸ್ಯರ ಹೆಸರನ್ನು ಘೋಷಿಸಲಾಯಿತು.ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ನೂತನ ಸಮಿತಿಗೆ ಶುಭಹಾರೈಸಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷರೂ ಪಂಚಾಯತ್ ಅಧ್ಯಕ್ಷರೂ ಆದ ಶಂಕರ ಡಿ, ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಕೆ.ಯಂ, ಮಂಡಲ ಕಾರ್ಯದರ್ಶಿ ಅವಿನಾಶ್ ವಿ.ರೈ, ವಿ.ಬಾಲಕೃಷ್ಣ ಶೆಟ್ಟಿ,, ಪಂಚಾಯತ್ ಸದಸ್ಯರು, ಹಿರಿಯ ಕಾರ್ಯಕರ್ತರಾದ ಜಯರಾಮ ಚೆಟ್ಟಿಯಾರ್, ಗಣೇಶ್ ಅಡ್ವಕೆಟ್, ವಿಜಯನ್ ಯಂ.ವಿ ಮೊದಲಾದವರು ಶುಭಹಾರೈಸಿಸಿದರು. ಆನಂದ ಕೆ ಸ್ವಾಗತಿಸಿ, ಶರತ್ ಕುಮಾರ್ ಶೆಟ್ಟಿ ವಂದಿಸಿದರು.
Tags
ಬದಿಯಡ್ಕ


