ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿಗೆ ಬಿಜೆಪಿಯಿಂದ ಅಭಿನಂದನೆ

ಬದಿಯಡ್ಕ:- ಪೆರಡಾಲ ಹದಿಮೂರನೇ ವಾರ್ಡ್ ಬಿಜೆಪಿ ಸಮಿತಿಯ ವತಿಯಿಂದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ+ ಪಡೆದ ಬೀಜಂತಡ್ಕ ಇಳಂತೋಡಿ ಕಿರಣ, ರೇಖ ದಂಪತಿಗಳ ಪುತ್ರಿ ನವಜೀವನ ಹೈಸ್ಕೂಲ್ ನ ವಿದ್ಯಾರ್ಥಿನಿ ಕುಮಾರಿ ರೋಷಿಕಾ ಕಿರಣ್ ಳನ್ನು ಅಭಿನಂದಿಸಲಾಯಿತು. 

ವಾರ್ಡ್ ಸಮಿತಿ ಅಧ್ಯಕ್ಷರೂ,ಹಿರಿಯ ಬಿಜೆಪಿ ಕಾರ್ಯಕರ್ತರು ಆದ ನಾರಾಯಣ ಮಾಸ್ಟರ್ ಮೈರ್ಕಳ ಹಾಗೂ ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷೆ, ವಾರ್ಡ್ ಪ್ರತಿನಿಧಿ ಅಶ್ವಿನಿ ಕೆಯಂ ಜಂಟಿಯಾಗಿ ಶಾಲು ಹೊದಿಸಿ ಗೌರವಿಸಿದರು. ವಾರ್ಡ್ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ ಪೆರಡಾಲ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ರಾಮಚಂದ್ರ ಮಣಿಯಾಣಿ ಸ್ವಾಗತಿಸಿ , ನಾರಾಯಣ ಮಣಿಯಾಣಿ ಇಳಂತೋಡಿ ವಂದಿಸಿದರು, ನಂತರ ಸಿಹಿತಿಂಡಿ ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು