ಒಂಟಿಯಾಗಿ ವಾಸಿಸುತ್ತಿದ್ದ ಯುವಕನ ಮೃತದೇಹ ಮನೆಯಲ್ಲಿ ಪತ್ತೆ


ಪೆರ್ಲ: ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಯುವಕನೊಬ್ಬ ಮನೆಯೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಲ, ಮಣಿಯಂಪಾರೆ, ಮಂಜೋಡಿ ಹೌಸ್ ನಿವಾಸಿ ದಿವಂಗತ ದೇವಣ್ಣ ನಾಯ್ಕ್ - ಲಲಿತ ದಂಪತಿಗಳ ಪುತ್ರ ಪ್ರವೀಣ್ (41) ಮೃತಪಟ್ಟ ವ್ಯಕ್ತಿ.

  ಕೂಲಿ ಕಾರ್ಮಿಕನಾಗಿದ್ದ ಇವರು ಅವಿವಾಹಿತರಾಗಿದ್ದು, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಸಹೋದರಿ ಹಲವಾರು ಬಾರಿ ಫೋನ್ ಮಾಡಿದರೂ ಕರೆ ಸ್ವೀಕರಿಸದ ಕಾರಣ ನಿನ್ನೆ (ಗುರುವಾರ) ಸಂಜೆ ಮನೆಗೆ ಬಂದು ನೋಡಿದಾಗ ಪ್ರವೀಣ್ ಶವವಾಗಿ ಪತ್ತೆಯಾಗಿದೆ. ತಕ್ಷಣವೇ ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಲಾಯಿತು.

 ಸ್ಥಳಕ್ಕೆ ಆಗಮಿಸಿದ ಬದಿಯಡ್ಕ ಪೊಲೀಸರು ಮಹಜರು ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮೃತರು 

 ಸಹೋದರ ಸಹೋದರಿಯರಿಯರಾದ ಶಾರದಾ, ಪುಷ್ಪಾ, ಉಮಾವತಿ, ಗಂಗಾವತಿ, ಸಂತೋಷ್ ಕುಮಾರ್ ಎಂಬಿವರನ್ನು ಅಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು