ಬದಿಯಡ್ಕ: ಬದಿಯಡ್ಕ ಬಸ್ಸು ನಿಲ್ದಾಣ ಮುಂಭಾಗದಲ್ಲಿ ವಿದ್ಯಾದೀಪ ವೆರೈಟಿ ಸ್ಟೋರ್ಸ್ ಪುಸ್ತಕ ವ್ಯಾಪಾರ ಸಂಸ್ಥೆ ನಡೆಸುತ್ತಿದ್ದ ಉಮಾನಾಥ ಕಾಮತ್ (72) ನಿಧನರಾದರು. ಆರ್.ಎಸ್.ಎಸ್.ನ ಹಿರಿಯ ಸ್ವಯಂಸೇವಕರಾಗಿದ್ದ ಅವರು ಹಲವು ವರ್ಷಗಳ ಕಾಲ ಬದಿಯಡ್ಕದಲ್ಲಿ ವಿದ್ಯಾದೀಪ ಸಂಸ್ಥೆಯನ್ನು ನಡೆಸುತ್ತಿದ್ದು ಪುಸ್ತಕ, ಇತರ ವ್ಯಾಪಾರ ಮಾಡುತ್ತಿದ್ದರು.ಮೃತರು ಪತ್ನಿ ಉಷಾ ಕಾಮತ್, ಮಕ್ಕಳಾದ ದೀಪಾ ಕಾಮತ್, ವಿದ್ಯಾ ಕಾಮತ್, ಅಳಿಯ ಪ್ರಮೋದ್ ಕುಮಾರ್ ಕಿಣಿ, ಸಹೋದರ ಸುಬ್ರಹ್ಮಣ್ಯ ಕಾಮತ್, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Tags
ಬದಿಯಡ್ಕ
