ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ನೇತೃತ್ವದಲ್ಲಿ ಸ್ಕಂದ ಕೈಗಾರಿಕಾ ಸಂಸ್ಥೆಯ ವಠಾರದಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭ

ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಕಾಸರಗೋಡು ಇದರ ನೇತೃತ್ವದಲ್ಲಿ ಸ್ಕಂದ ಕೈಗಾರಿಕಾ ಸಂಸ್ಥೆಯ ವಠಾರದಲ್ಲಿ ಯಕ್ಷಗಾನ ನಾಟ್ಯ ತರಗತಿಯು ಪ್ರಾರಂಭವಾಯಿತು.

ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ ಮತ್ತು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಡ್ಕ ಇವರು ದೀಪಜ್ವಲನ ಮಾಡಿ  ಕಾರ್ಯಕ್ರಮ ಉದ್ಘಾಟಿಸಿದರು.

ಕೃಷ್ಣ ಭಟ್ ಅಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ನಾಟ್ಯ ತರಗತಿಯು ಬಾಲಕೃಷ್ಣ ಏಳ್ಕಾನ ಇವರ ನೇತೃತ್ವದಲ್ಲಿ ಜರಗಿತು.

ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಕಾರ್ಯಕ್ರಮ ಸಂಯೋಜನೆ ಮಾಡಿದರು.

  ವೆಂಕಟ ಭಟ್ ಎಡನೀರು, ಹರಿಕೃಷ್ಣ, ಪಲ್ಲವಿ,  ವಿಜಯಮುರಳಿ , ರಾಜೇಶ್ವರಿ, ಸರಸ್ವತಿ ಇವರು ಉಪಸ್ಥಿತರಿದ್ದರು.  

ಮುಂದಿನ ದಿನಗಳಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಯನ್ನು ಮಾಡಲು ತೀರ್ಮಾನಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು