ಇಲಿ ವಿಷ ಸೇವಿಸಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು


ಕಾಸರಗೋಡು: ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಚೆರುವತ್ತೂರು ಕೈತಕ್ಕಾಡ್ ಪಯ್ಯಂಕಿ ಬಿಸ್ಮಿಲ್ಲಾ ರಸ್ತೆಯ ನಿವಾಸಿ ಅಬ್ದುಲ್ ರಹಮಾನ್ ಎಂಬವರ ಪುತ್ರಿ ಮುಬಶೀರಾ (19) ಮೃತಪಟ್ಟ ದುರ್ದೈವಿ.

ಈ ತಿಂಗಳ 2 ರಂದು ಯುವತಿ ಮನೆಯಲ್ಲಿ ಇಲಿ ವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವು ಸಂಭವಿಸಿದೆ. ಚಂದೇರ ಪೊಲೀಸರು ಕೇಸು ದಾಖಲಿಸಿದರು. ಈಕೆ ಕೈತಕ್ಕಾಡ್ ಅಲ್ ವರ್ದಾ ವುಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು.

ಮೃತರು ತಾಯಿ ಯು.ಎಂ. ಫಾತಿಮಾ. ಸಹೋದರ ಸಹೋದರಿಯರಾದ ಫಾಯಿಝಾ, ರಾಶಿದಾ, ಸಲ್ಮಾನ್ ಎಂಬಿವರನ್ನು ಅಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು