ಪೆರ್ಲ: ಪೆರ್ಲದ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ವತಿಯಿಂದ ವಿಶ್ವ ಆಹಾರ ಸುರಕ್ಷತಾ ದಿನ ಆಚರಿಸಲಾಯಿತು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ಪಿ.ಪೌಷ್ಟಿಕ ಆಹಾರದ ಮಹತ್ವ ಹಾಗೂ ಆಹಾರ ಸುರಕ್ಷತೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಉತ್ತಮ ಆರೋಗ್ಯಕ್ಕಾಗಿ ಸುರಕ್ಷಿತ ಮತ್ತು ಸಮತೋಲಿತ ಆಹಾರ ಸೇವನೆಯ ಮಹತ್ವವನ್ನು ವಿವರಿಸಿದರು. ಎನ್ನೆಸ್ಸೆಸ್ ಸ್ವಯಂಸೇವಕಿ ತುಳಸಿ ಸ್ವಾಗತಿಸಿದರು. ಶ್ರೀಲಕ್ಷ್ಮಿ ನಿರೂಪಿಸಿದರು. ಶ್ರದ್ಧಾ ವಂದಿಸಿದರು.
Tags
ಪೆರ್ಲ
