ಮುಳ್ಳೇರಿಯ: ಮನೆಯಿಂದ ಹೊರಟ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೆಳ್ಳೂರು ನೆಟ್ಟಣಿಗೆ ಬಸ್ತಿಯ ವಿನಯ ಕುಮಾರ್ (40) ನಾಪತ್ತೆಯಾದವರು. ಈ ತಿಂಗಳ 7 ರಂದು ಬೆಳಿಗ್ಗೆ 9:30 ರ ಸುಮಾರಿಗೆ ಮನೆಯಿಂದ ಹೋದವರು ವಾಪಸ್ ಬಂದಿಲ್ಲ ಎನ್ನಲಾಗಿದೆ.
ಬಳಿಕ ಇವರ ಬಗ್ಗೆ ಸಂಬಂಧಿಕರ ಮನೆ ಹಾಗೂ ಇತರ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ತಾಯಿ ಮಾಲತಿ ಅವರು ಆದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Tags
ಮುಳ್ಳೇರಿಯ
