ಶಾಲಾ ವಾಹನ ಚಲಾಯಿಸುತ್ತಿದ್ದಾಗ ಅಸ್ವಸ್ಥಗೊಂಡ ಚಾಲಕ ಆಸ್ಪತ್ರೆಯಲ್ಲಿ ನಿಧನ


 ಶಾಲಾ ವಾಹನ ಚಲಾಯಿಸುತ್ತಿದ್ದಾಗ ಅಸ್ವಸ್ಥಗೊಂಡ ಚಾಲಕ ಆಸ್ಪತ್ರೆಯಲ್ಲಿ ನಿಧನರಾದ ಘಟನೆ ನಡೆದಿದೆ. ಕೋಜಿಕ್ಕೋಡು ಕುಟ್ಯಾಡಿ ಅಡುಕ್ಕತ್ ಅಯಿರಾಣಿಪ್ಪೊಯಿಲ್ ನಿವಾಸಿ ಅನಿಲ್ ಕುಮಾರ್ (50) ಮೃತಪಟ್ಟ ಚಾಲಕ. ಸೋಮವಾರ ಸಂಜೆ ಶಾಲಾ ಮಕ್ಕಳನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ವೇಳಂ ಚೆರುಕುನ್ನು ಎಂಬಲ್ಲಿ ತಲುಪಿದಾಗ ತೀವ್ರ ಅಸ್ವಸ್ಥತೆ ಅನುಭವಕ್ಕೆ ಬಂದ ತಕ್ಷಣ, ಅನಿಲ್ ಕುಮಾರ್ ವ್ಯಾನ್ ಅನ್ನು ರಸ್ತೆ ಬದಿಗೆ ನಿಲ್ಲಿಸಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದರು. ತದನಂತರ ಹತ್ತಿರದಲ್ಲಿದ್ದ ಸ್ಥಳೀಯರನ್ನು ಕರೆದು, ಶಾಲಾ ಆಡಳಿತ ಮಂಡಳಿಗೆ ವಿಷಯ ಮುಟ್ಟಿಸುವಂತೆ ತಿಳಿಸಿದರು. ಶಾಲಾ ಅಧಿಕಾರಿಗಳು ತಕ್ಷಣ ಆಂಬ್ಯುಲೆನ್ಸ್‌ನೊಂದಿಗೆ ಧಾವಿಸಿ ಅನಿಲ್ ಅವರನ್ನು ಆಸ್ಪತ್ರೆಗೆ ತಲುಪಿಸಿದರಾದರೂ, ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಬಳಿಕ ಮತ್ತೊಬ್ಬ ಚಾಲಕ ಬಂದು ಮಕ್ಕಳನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸಿದನು. ಅನಿಲ್ ಅವರು ಸುದೀರ್ಘ ಕಾಲದಿಂದ ಇದೇ ಶಾಲೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು