ಮುಳಿಯಾರು ಬಾಲಗೋಕುಲಂ ಶ್ರೀ ಕೃಷ್ಣ ಜಯಂತಿ ಮಹೋತ್ಸವ ಸಮಿತಿ ರಚನೆ


ಬೋವಿಕಾನ: ಯುಗಪುರುಷನಾದ ಭಗವಂತನ ಜನ್ಮದಿನವನ್ನು ಮುಳಿಯಾರು ಬಾಲಗೋಕುಲಂ ವತಿಯಿಂದ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ. ಈ ಆಚರಣೆಯ ಯಶಸ್ಸಿಗಾಗಿ ಹಮ್ಮಿಕೊಳ್ಳಲಾಗಿದ್ದ ಮಹೋತ್ಸವ ಸಮಿತಿ ರಚನಾ ಸಭೆಯು ಬೋವಿಕಾನದ ಸೌಪರ್ಣಿಕಾ ಆಡಿಟೋರಿಯಂನಲ್ಲಿ ಜರುಗಿತು. ಮುಳಿಯಾರು ಬಾಲಗೋಕುಲಂ ಅಧ್ಯಕ್ಷ ಮಧುಸೂದನನ್ ಚಿಪ್ಲಿಕ್ಕಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರಡ್ಕ ಖಂಡ್ ಸೇವಾ ಪ್ರಮುಖ್ ಗಣೇಶ್ ಅಡೂರ್ ಉದ್ಘಾಟಿಸಿದರು.

ಸಭೆಯಲ್ಲಿ ಕರುಣಾಕರನ್ ಮಾಸ್ಟರ್, ಬಾಲಗೋಕುಲಂ ಕಾಸರಗೋಡು ಗೋಕುಲ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮತ್ತು ಬಾಲಗೋಕುಲಂ ತಾಲೂಕು ಕಾರ್ಯದರ್ಶಿ ಅನಿರುದ್ಧ್ ಮಾತನಾಡಿದರು. ಬಾಲಗೋಕುಲಂ ಕಾರ್ಯದರ್ಶಿ ಮನೋಜ್ ಕುಮಾರ್ ಎಂ.ಸಿ. ಸ್ವಾಗತಿಸಿದರು ಮತ್ತು ಸುರೇಶ್ ನರಿಕೋಲ್ ವಂದಿಸಿದರು. ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

 ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ (ನಿವೃತ್ತ ಐ.ಎ.ಎಸ್ ಅಧಿಕಾರಿ), ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ನರಿಕೋಲ್,ಕೋಶಾಧಿಕಾರಿಯಾಗಿ ಬಾಲಕೃಷ್ಣನ್ ಕೊಟ್ಟೂರ್

 ಮಹೋತ್ಸವ ಪ್ರಮುಖರಾಗಿ ರಂಜಿತ್ ಅಮ್ಮಂಗೋಡ್ ಅವರನ್ನು ಆಯ್ಕೆ ಮಾಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು