ಮಹಿಳೆಯರಿಗೆ ಉಚಿತ ಬಸ್ಸು ಸೇವೆ; ಪೆರ್ಲದಲ್ಲಿ ಯುಡಿಎಫ್ ವತಿಯಿಂದ ಬಸ್ಸಿಗೆ ಸ್ವಾಗತ


 ಪೆರ್ಲ : ಯುಡಿಎಫ್ ನೀಡಿದ ಚುನಾವಣಾ ಭರವಸೆಯಾದ ಮಹಿಳೆಯರಿಗೆ ಉಚಿತ ಕೆಎಸ್ಸಿರ್ಟೀಸಿ ಬಸ್ ಪ್ರಯಾಣ ಸೌಲಭ್ಯದ ಪ್ರಿಯದರ್ಶಿನಿ ಯೋಜನೆಯನ್ನು ಮುಖ್ಯಮಂತ್ರಿ ವಿ. ಡಿ. ಸತೀಶನ್ ಉದ್ಘಾಟಿಸಿದ ಹಿನ್ನೆಲೆಯಲ್ಲಿ ಎಣ್ಮಕಜೆ ಪಂಚಾಯತಿನ ಪೆರ್ಲ ಪೇಟೆಯಲ್ಲಿ ಕಾಸರಗೋಡು-ಪುತ್ತೂರು ರೂಟಿನ ಬಸ್ಸಿಗೆ ಯುಡಿಎಫ್ ವತಿಯಿಂದ  ಉಜ್ವಲ ಸ್ವಾಗತ ನೀಡಲಾಯಿತು.

ಯೋಜನೆ ಅನುಷ್ಠಾನಕ್ಕೆ ಬಂದ ಮೊದಲ ದಿನವೇ ನೂರಾರು ಮಹಿಳೆಯರು ಉಚಿತ ಪ್ರಯಾಣ ಅನುಭವಿಸಿ ಸಂಭ್ರಮಿಸಿದರು.

ಕಾಸರಗೋಡು ಜಿಲ್ಲೆಯ ಪ್ರಮುಖ ಅಂತರಾಜ್ಯ ರೂಟಾದ ಕಾಸರಗೋಡು -ಮಂಗಳೂರಿನ ಹೊರತು ಪುತ್ತೂರು-ಸುಳ್ಯ ರೂಟಿನಲ್ಲೂ ಮಹಿಳೆಯರಿಗೆ ಉಚಿತ ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪೆರ್ಲದಲ್ಲಿ ಯುಡಿಎಫ್ ಕಾರ್ಯಕರ್ತರು ಬಸ್ಸಿಗೆ

ಬಸ್ಸಿಗೆ ಹೂಹಾರ ತೊಡಿಸಿ ,ಸಿಹಿತಿಂಡಿ ವಿತರಿಸಿ ಸಂಭ್ರಮಿಸಿದರು. ಪ್ರಿಯದರ್ಶಿನಿ ಯೋಜನೆ ಗಡಿಭಾಗದ ಪ್ರದೇಶಗಳ ವಿಸ್ತರಣೆಗೆ ಕಾರಣರಾದ ಜಿಲ್ಲೆಯ ಯುಡಿಎಫ್ ಶಾಸಕರನ್ನು ಅಭಿನಂಧಿಸಲಾಯಿತು.

ಡಿಸಿಸಿ ಪ್ರಧಾನ‌ ಕಾರ್ಯದರ್ಶಿ,ಜಿ.ಪಂ.ಸದಸ್ಯ ಸೋಮಶೇಖರ್ ಜೆ.ಎಸ್.,ಎಣ್ಮಕಜೆ ಪ.ಅಧ್ಯಕ್ಷೆ ಕುಸುಮಾವತಿ ಟೀಚರ್, ಪಂ.ಉಪಾಧ್ಯಕ್ಷ ಸಿದ್ದಿಕ್ ವಳಮುಗೇರ್,ಸ್ಥಾಯಿ ಸಮಿತಿ ಅಧ್ಯಕ್ಷೆ ರಮ್ಲ,ಪಂ.ಸದಸ್ಯೆ ಆಯಿಷಾ ಎ.ಎ.,ರಾಬಿಯ, ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್,ಮುಸ್ಲಿಂಲೀಗ್  ನೇತಾರರಾದ ಹಮಿದಾಲಿ, ಆಶ್ರಫ್ ಅಮೆಕ್ಕಳ, ಹಮೀದ್ ಅಜಿಲಡ್ಕ, 

ಸಿಡಿಎಸ್ ಅಧ್ಯಕ್ಷೆ ನವೀನ ಕುಮಾರಿ, ಮಹಿಳಾ ಕಾಂಗ್ರೆಸ್ ನ ಸತ್ಯಭಾಮ,ಕಾಂಗ್ರೆಸ್ ನೇತಾರರಾದ ಅಮು ಅಡ್ಕಸ್ಥಳ,ಅಬ್ದುಲ್ಲ‌ ಕುರೆಡ್ಕ,  ಮಾಯಿಲ ನಾಯ್ಕ್,ರಸಾಕ್ ನಲ್ಕ,ನಜಿಬುಲ್ಲ ಶೇಣಿ,ಜಬ್ಬಾರ್ ನಲ್ಕ,ಶ್ರೀನಿವಾಸ ಶೆಣೈ, ಮಾಜಿ ಪಂ.ಸದಸ್ಯೆ ಪುಷ್ಪಾ ಶೇಣಿ ಮೊದಲಾದವರು ನೇತೃತ್ವ ನೀಡಿದರು. ಯುಡಿಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು