ಪೆರ್ಲ ಶಾಲೆಯಲ್ಲಿ ಮಕ್ಕಳ ಆಟದ ಜಾರುಬಂಡಿ ಉದ್ಘಾಟನೆ


 ಪೆರ್ಲ : ಎಸ್ ಎನ್ ಎ ಎಲ್ ಪಿ ಶಾಲೆಯ 2025-26ರ ಪಿಟಿಎ ನವೀಕರಿಸಿದ ಮಕ್ಕಳ ಆಟದ ಜಾರುಬಂಡಿ  ಉದ್ಘಾಟನೆಯನ್ನು 

ಸ ನಾ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ ಉದ್ಘಾಟಿಸಿ 'ಆಟ ಪಾಠದ ಜೊತೆಗೆ ಮಕ್ಕಳ ಆನಂದಮಯ ಕಲಿಕೆಯನ್ನು ಪ್ರೋತ್ಸಾಹಿಸಲು ಆಟದ ವ್ಯವಸ್ಥೆಗಳು ಪ್ರಧಾನ ಪಾತ್ರ ವಹಿಸುತ್ತದೆ' ಎಂದು ನುಡಿದರು. ಎಣ್ಮಕಜೆ ಪಂ.ಸದಸ್ಯರಾದ ಆಯಿಷಾ ಪೆರ್ಲ, ಕೃಷ್ಣಪ್ಪ ಬಜಕೂಡ್ಲು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಕೇಶವ ಪ್ರಕಾಶ್, ಪ್ರೌಢ ಶಾಲಾ ಪಿಟಿಎ ಅಧ್ಯಕ್ಷ ಪುರುಷೋತ್ತಮ ಬಜಕೂಡ್ಲು ಉಪಸ್ಥಿತರಿದ್ದರು. ಶಾಲಾ ಪಿಟಿಎ ಅಧ್ಯಕ್ಷ ರಾಜೇಶ್ ಬಜಕೂಡ್ಲುರವರ ಶಾಲೆಯ ಅಭಿವೃದ್ಧಿ ಚಟುವಟಿಕೆಗಳ ಶ್ರಮವನ್ನು ಪರಿಗಣಿಸಿ ಶಾಲು ಹೊದಿಸಿ ಗೌರವಿಸಲಾಯಿತು.ಕಾರ್ಯಾಕಾರಿ ಸಮಿತಿ ಸದಸ್ಯರಾದ ನವೀನ್ ಉಕ್ಕಿನಡ್ಕ, ಅರುಣ್ ಕುಮಾರ್ ಖಂಡಿಗೆರವರನ್ನು ಗೌರವಿಸಲಾಯಿತು.ಶಾಲಾ ಶಿಕ್ಷಕ ಉದಯ ಸಾರಂಗ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ  ವಂದಿಸಿದರು. ಮಕ್ಕಳ ಹೆತ್ತವರು ಮಕ್ಕಳು ಸಂಭ್ರಮದ ಕಾಯ೯ಕ್ರಮಕ್ಕೆ ಸಾಕ್ಷಿಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು