ತಿರುವನಂತಪುರಂ: ಕೇರಳ ವಿಧಾನಸಭೆಯಲ್ಲಿ ಬಿಜೆಪಿಗೆ ಕಾರ್ಯಾಲಯ ಮಂಜೂರು ಮಾಡಲಾಗಿದೆ. ವಿಧಾನ ಸಭಾ ಅಧ್ಯಕ್ಷ ತಿರುವಂಜೂರು ರಾಧಾಕೃಷ್ಣನ್ ಹೊರಡಿಸಿದ ಆದೇಶದಲ್ಲಿ ವಿಧಾನಸಭೆಯ 303 ನೇ ಕೋಣೆಯನ್ನು ಬಿಜೆಪಿ ಸಂಸದೀಯ ಕಾರ್ಯಾಲಯಕ್ಕಾಗಿ ನೀಡಲಾಗಿದೆ. ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಕಾರ್ಯಾಲಯ ಲಭಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 3 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. ಪೂಜಾ ವಿಧಿ ವಿಧಾನಗಳ ನಂತರ ಕಾರ್ಯಾಲಯದ ಚಟುವಟಿಕೆ ಆರಂಭವಾಗಲಿದೆ.
Tags
ತಿರುವನಂತಪುರಂ
