ಹದಿನಾಲ್ಕು ವರ್ಷದ ಬಾಲಕನಿಗೆ ಕಿರುಕುಳ; ಮದ್ರಸ ಶಿಕ್ಷಕನ ವಿರುದ್ದ ಪೋಕ್ಸೋ ಕೇಸು



ಕಾಸರಗೋಡು: ಹದಿನಾಲ್ಕು ವರ್ಷದ ಬಾಲಕನಿಗೆ ಪ್ರಕೃತಿ ವಿರೋಧಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಾಗಿದೆ. ಈ ಸಂಬಂಧ ಬಾಲಕ ಕಲಿಯುತ್ತಿರುವ ಮದ್ರಸಾದ ಶಿಕ್ಷಕ ಮೊಹಮ್ಮದ್ ಎಂಬಾತನ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2024 ರಿಂದ 2026 ರವರೆಗಿನ ಅವಧಿಯಲ್ಲಿ ಹಲವು ಬಾರಿ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮದ್ರಸಾ ಶಿಕ್ಷಕನ ಕಿರುಕುಳಕ್ಕೆ ಒಳಗಾದ 14 ವರ್ಷದ ಬಾಲಕನ ದೂರಿನ ಮೇರೆಗೆ ಬೇಕಲ ಪೊಲೀಸರು ಮತ್ತೊಂದು ಪೋಕ್ಸೊ (POCSO) ಪ್ರಕರಣವನ್ನು ದಾಖಲಿಸಿದ್ದಾರೆ. 2024 ರಿಂದ ಹಲವು ಬಾರಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅದೇ ಮದ್ರಸಾದ ಹಿರಿಯ ವಿದ್ಯಾರ್ಥಿಯಾದ 15 ವರ್ಷದ ಬಾಲಕನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು