ಬದಿಯಡ್ಕ: 0.49 ಗ್ರಾಂ ಮಾರಕ ಮಾದಕ ವಸ್ತುವಿನೊಂದಿಗೆ (ಡ್ರಗ್ಸ್) ಯುವಕನೊಬ್ಬನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಚೆರ್ಲಡ್ಕದ ಅಬ್ದುಲ್ ಜವಾದ್ ಸಿ.ಎಂ. (28) ಬಂಧಿತ ಯುವಕ.
ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ನೆಲ್ಲಿಕಟ್ಟೆ ಸಮೀಪದ ಚೆನ್ನಡ್ಕದಲ್ಲಿ ಸಬ್ ಇನ್ಸ್‌ಪೆಕ್ಟರ್ (ಎಸ್.ಐ) ರೂಪೇಶ್ ಅವರ ನೇತೃತ್ವದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ, ನೆಲ್ಲಿಕಟ್ಟೆಯ ಮೆಲ್ಬೋರ್ನ್ ಅರೆನಾ ಫುಟ್‌ಬಾಲ್ ಟರ್ಫ್ ಸಮೀಪ ಪೊಲೀಸ್ ವಾಹನವನ್ನು ಕಂಡು ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ ಯುವಕನೊಬ್ಬ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಆತನನ್ನು ಬೆನ್ನಟ್ಟಿ ತಡೆದು ನಿಲ್ಲಿಸಿ ದೇಹ ತಪಾಸಣೆ ನಡೆಸಿದಾಗ ಪ್ಯಾಂಟ್ ಜೇಬಿನಲ್ಲಿ ಬಾಂಧ ಬಿಟ್ಟಿದ್ದ ಮಾದಕ ವಸ್ತು ಪತ್ತೆಯಾಗಿದೆ.
ಪೊಲೀಸ್ ತಂಡದಲ್ಲಿ ಗ್ರೇಡ್ ಎ.ಎಸ್.ಐ ಶಶಿಕುಮಾರ್ ಮತ್ತು ಸಿ.ಪಿ.ಒ ಅನೀಶ್ ಉಪಸ್ಥಿತರಿದ್ದರು.
Tags
ಬದಿಯಡ್ಕ
