ಕನ್ನೆಪ್ಪಾಡಿ ಸಮೀಪದ ಪಡಿಪ್ಪುರೆ ನಿವಾಸಿ ಕುಸಿದು ಬಿದ್ದು ಮೃತ್ಯು


 ಬದಿಯಡ್ಕ : ಕನ್ಯಪಾಡಿ ಸಮೀಪದ ಪಡಿಪ್ಪುರೆ ಯ ದಿ. ಕೊಗ್ಗ ಎಂಬವರ ಪುತ್ರ ಐತ್ತಪ್ಪ  (54)  ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಇಂದು ಬೆಳಗ್ಗೆ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದು ಕೂಡಲೇ ಬದಿಯಡ್ಕ ಆಸ್ಪತ್ರೆಗೂ ಅನಂತರ ಕಾಸರಗೋಡು ಜನರಲ್ ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಈ ವೇಳೆ ಅವರು ಮೃತಪಟ್ಟಿದ್ದರು. ಐತ್ತಪ್ಪ ಅವರು ಕೂಲಿ ಕಾರ್ಮಿಕರಾಗಿದ್ದರು. ಮೃತರು ಪತ್ನಿ ವಸಂತಿ, ಮಕ್ಕಳಾದ ಜಯಲಕ್ಷ್ಮಿ, ರಮ್ಯ, ಶ್ರೀಹರಿ, ದೀಪಾಶ್ರಿ, ಅನುಶ್ರೀ, ಅಳಿಯ ವಸಂತ, ಸಹೋದರ ಸಹೋದರಿಯರಾದ ವಸಂತಿ, ಬಾಲಕೃಷ್ಣ, ಉದಯ, ಮಹಾಲಿಂಗೇಶ್ವದ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು