ಬದಿಯಡ್ಕದಲ್ಲಿ ಬಿವರೇಜಸ್ ಸರಕಾರೀ ಮದ್ಯದಂಗಡಿ ಆರಂಭ



 ಬದಿಯಡ್ಕ: ಕೇರಳ ರಾಜ್ಯ ಬಿವರೇಜಸ್ ಮದ್ಯದಂಗಡಿ (ಸಿವಿಲ್) ಬದಿಯಡ್ಕದಲ್ಲಿ ಆರಂಭಗೊಂಡಿದೆ. ಮುಳ್ಳೇರಿಯದಲ್ಲಿ ಕಾರ್ಯಾಚರಿಸುತ್ತಿದ್ದ ಮದ್ಯದಂಗಡಿ ಇಂದು ಬದಿಯಡ್ಕದಲ್ಲಿ ವ್ಯಾಪಾರ ಆರಂಭಿಸಿದೆ. ಇಂದು‌ ಮದ್ಯಾಹ್ನ 12 ಗಂಟೆಯಿಂದಲೇ ಮದ್ಯ ವ್ಯಾಪಾರ ಆರಂಭಗೊಂಡಿದ್ದು ಮದ್ಯ ಪ್ರಿಯರು ಬದಿಯಡ್ಕದತ್ತ ಧಾವಿಸುತ್ತಿದ್ದಾರೆ.
ಈ ಹಿಂದೆ ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿದ್ದ ಬಿವರೇಜಸ್ ಮದ್ಯದಂಗಡಿ, ಹೆದ್ದಾರಿ ಸಂಬಂಧ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮುಳ್ಳೇರಿಯ ಪೇಟೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಮುಳ್ಳೇರಿಯ ಮದ್ಯದಂಗಡಿಯನ್ನು ಬದಿಯಡ್ಕಕ್ಕೆ ತರಲಾಗಿದೆ. ಮುಳ್ಳೇರಿಯ ಮದ್ಯದಂಗಡಿ ಮುಚ್ಚಲಾಗಿದೆ.
ಉದ್ಘಾಟನೆಯ ವೇಳೆ ಬಿವರೇಜಸ್ ಅಧಿಕಾರಿಗಳು, ಸಿಬಂದಿಗಳು, ವ್ಯಾಪಾರಿ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು