ಕೊಚ್ಚಿ:ಮಲಯಾಳಂ ಚಲನಚಿತ್ರದಲ್ಲಿ ಹಾಸ್ಯ ನಟರಾಗಿದ್ದ ಸಲೀಂ ಕುಮಾರ್ (56) ನಿಧನರಾಗಿದ್ದಾರೆ. ಆರೋಗ್ಯ ಸ್ಥಿತಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿನ್ನೆ (ಶನಿವಾರ) ರಾತ್ರಿ 10.43 ರ ಸುಮಾರಿಗೆ ಅವರು ಕೊನೆಯುಸಿರೆಳೆದರು. ಅವರು ದೀರ್ಘಕಾಲದಿಂದ ಯಕೃತ್ (ಲಿವರ್) ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್‌ನಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ. 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ಹೆಚ್ಚಾಗಿ ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಸಲೀಂ ಕುಮಾರ್ ತಮ್ಮ ಮಿಮಿಕ್ರಿ ಜೀವನವನ್ನು ಕೊಚ್ಚಿನ್ ಕಲಾಭವನದಲ್ಲಿ ಪ್ರಾರಂಭಿಸಿದ್ದರು..
Tags
ಕೊಚ್ಚಿನ್
