ಬದಿಯಡ್ಕ: ಅನುದಾನಿತ ಹಿರಿಯ ಬುನಾದಿ ಶಾಲೆ, ಕುಂಟಿಕಾನದ ಶಾಲಾ ಪ್ರವೇಶೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅನ್ನತ್ ಬಿ ವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಥಳೀಯ ವಾರ್ಡ್ ಸದಸ್ಯರಾದ ಶ್ರೀ ಶ್ಯಾಮ್ ಪ್ರಸಾದ ಸರಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಶರ್ಮ, ಎಂ ಪಿ ಟಿಎ ಅಧ್ಯಕ್ಷೆ ಶ್ರೀಮತಿ ಆಶಾ ಮೋಳ್, ಸ್ಟಾಫ್ ಸೆಕ್ರೆಟರಿ ಸುಭಾಷ್ ಇ ಕೆ, ನಿವೃತ್ತ ಹಿಂದಿ ಅಧ್ಯಾಪಿಕೆ ಶ್ರೀಮತಿ ಮೂಕಾಂಬಿಕಾ ಶುಭ ಹಾರೈಸಿದರು..ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕಮರುದ್ದೀನ್ ಪಾಡ್ಲಡ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾರ್ಥನೆಯನ್ನು ಆಧ್ಯಾಪಿಕೆ ಶ್ರೀಮತಿ ಅಖಿಲ ಲಕ್ಷ್ಮಿ ಹಾಡಿದರೆ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಮಾರ್ ಕೆ ಸ್ವಾಗತಿಸಿದರು. ನವಾಗತ ಮಕ್ಕಳಿಗೆ ಬ್ಯಾಗ್ ಪುಸ್ತಕ ಹಾಗೂ ಇನ್ನಿತರ ಕಿಟ್ ನೀಡಿ ಸ್ವಾಗತಿಸಲಾಯಿತು. ಅಧ್ಯಾಪಕ ಸಲಾಂ ಮಾಸ್ಟರ್ ರಕ್ಷಕರಿಗೆ ವಿಶೇಷ ತರಗತಿಯನ್ನು ನಡೆಸಿಕೊಟ್ಟರು. ಎಸ್ ಆರ್ ಜಿ ಕನ್ವೀನರ್ ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರೆ ಕೊನೆಯಲ್ಲಿ ಅಧ್ಯಾಪಕ ತಿರುಮಲೇಶ್ವರ ಎ ವಂದಿಸಿದರು.
Tags
ಬದಿಯಡ್ಕ
