ಕುಂಬಳೆ: ಮಗ ಚಲಾಯಿಸುತ್ತಿದ್ದ ಸ್ಕೂಟರ್ ನಿಂದ ಕೆಳಗೆ ಬಿದ್ದು ತಾಯಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಬಳೆ ಸುನಾಮಿ ಕಾಲೋನಿಯ ಮೊಯ್ದೀನ್ ಕುಂಞಿ ಅವರ ಪತ್ನಿ ಆತ್ತಿಕ್ಕಾ (48) ಮೃತಪಟ್ಟವರು. ಸ್ಕೂಟರ್ ಚಲಾಯಿಸುತ್ತಿದ್ದ ಮಗ ಮುಬಾರಕ್ (19) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.
ನಿನ್ನೆ (ಶುಕ್ರವಾರ) ರಾತ್ರಿ 7:30ರ ಸುಮಾರಿಗೆ ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ದೇವಿನಗರ ಸರ್ವಿಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಮುಬಾರಕ್ ಚಲಾಯಿಸುತ್ತಿದ್ದ ಸ್ಕೂಟರ್‌ನ ಹಿಂಬದಿಯ ಸೀಟಿನಲ್ಲಿ ಆತ್ತಿಕ್ಕಾ ಪ್ರಯಾಣಿಸುತ್ತಿದ್ದರು.
ಅಪಘಾತಕ್ಕೆ ಸಂಬಂಧಿಸಿದಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಇತರ ಮಕ್ಕಳಾದ ಹಸೀನಾ, ಹನ್ನತ್ ಹಾಗೂ ಅಳಿಯಂದಿರಾದ ಕಬೀರ್ ಮತ್ತು ಸಫಾನ್ ಅವರನ್ನು ಅಗಲಿದ್ದಾರೆ.
Tags
ಕುಂಬಳೆ
