ತಿರುವನಂತಪುರಂ: ಬಿಡುವಿನ ನಂತರ, ನಾಳೆಯಿಂದ (ಆದಿತ್ಯವಾರ) ಅರಬ್ಬಿ ಸಮುದ್ರದಲ್ಲಿ ಪಶ್ಚಿಮ ಮಾರುತಗಳು ಸಲ್ಪ ಮಟ್ಟಿಗೆ ಸಕ್ರಿಯಗೊಳ್ಳುವುದರೊಂದಿಗೆ ಮುಂಗಾರು ಮಳೆ ಮತ್ತೆ ಆರಂಭವಾಗಲಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರದ ವೇಳೆಗೆ ಹೆಚ್ಚಿನ ಪ್ರದೇಶಗಳಲ್ಲಿ ಮಳೆ ಚುರುಕಾಗಲಿದ್ದು, ಜೂನ್ 25 / 26 ರವರೆಗೆ ರಾಜ್ಯಾದ್ಯಂತ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ಬಂಗಾಳ ಕೊಲ್ಲಿಯಲ್ಲಿ ಹೊಸದಾಗಿ ವಾಯುಭಾರ ಕುಸಿತ (ಚಕ್ರವಾತ ಸುಳಿ) ಉಂಟಾಗುತ್ತಿರುವುದರಿಂದ, ಕೇರಳ ಕರಾವಳಿಯಲ್ಲಿ ಮುಂಗಾರು ಮಾರುತಗಳು ಮತ್ತಷ್ಟು ಬಲಗೊಳ್ಳಲಿವೆ. ಇದರ ಪ್ರಭಾವದಿಂದ ಜೂನ್ 26 ರ ನಂತರ 3-4 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಮಧ್ಯ ಮತ್ತು ಉತ್ತರ ಕೇರಳದ ಜಿಲ್ಲೆಗಳಲ್ಲಿ ಮಳೆ ಹೆಚ್ಚು ತೀವ್ರವಾಗಿರಲಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.
Tags
ತಿರುವನಂತಪುರಂ
